ನಿನ್ನೆ ನಡೆಸಿದ ಪ್ರತಿಭಟನೆಯಲ್ಲಿ ನಮ್ಮೊಂದಿಗೆ ಕೈ ಜೋಡಿಸದ ಬಿಜೆಪಿ ಸಂಸದರಿಗೆ ನಾಚಿಕೆಯಾಗಬೇಕು: ಡಿಕೆ ಶಿವಕುಮಾರ್, ಡಿಸಿಎಂ
ಸಂಸತ್ತಿನ ಇಂದಿನ ಕಾರ್ಯಕಲಾಪಗಳ ಬಗ್ಗೆ ಮಾತಾಡಿದ ಶಿವಕುಮಾರ್, ಬಿಜೆಪಿ ಸಂಸದ ತೇಜಸ್ವೀ ಸೂರ್ಯ ಅವರಿಗೆ ಮಾತಾಡುವ ಅವಕಾಶ ನೀಡಲಾಯಿತೇ ಹೊರತು, ಡಿಕೆ ಸುರೇಶ್ ಗೆ ಅವಕಾಶವನ್ನೇ ಕೊಡಲಿಲ್ಲ, ರಾಜ್ಯದ ಸಮಸ್ಯೆಗಳನ್ನು ಮಂಡಿಸಲು ಕಾಂಗ್ರೆಸ್ ಗೆ ಅವಕಾಶವಿಲ್ಲ ಎಂದರು.
ದೆಹಲಿ: ನಿನ್ನೆ ಕೇಂದ್ರ ಸರ್ಕಾರದ ವಿರುದ್ಧ ತಾರತಮ್ಯ ಧೋರಣೆ ಆರೋಪಿಸಿ ನಗರದ ಜಂತರ್ ಮಂತರ್ ನಲ್ಲಿ ರಾಜ್ಯ ಸರ್ಕಾರದ (state government) ಮಂತ್ರಿಗಳು, ಶಾಸಕರು, ಸಂಸದ ಮತ್ತು ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಅದನ್ನು ಯಶಗೊಳಿಸಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ (KPCC president) ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೃತಜ್ಞತೆ ಸಲ್ಲಿಸಿದರು. ಇನ್ನೂ ದೆಹಲಿಯಲ್ಲೇ ಇರುವ ಅವರು, ರಾಜ್ಯದ ಜನತೆಯ ಪರವಾಗಿ ಸರ್ಕಾರದ ಎಲ್ಲ ಪ್ರತಿನಿಧಿಗಳು ಮತ್ತು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು, ಇದು ರಾಜ್ಯಕ್ಕಾಗಿ ನಡೆದ ಹೋರಾಟವಾಗಿತ್ತು, ಬಿಜೆಪಿ ಸಂಸದರಿಗೂ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿತ್ತು, ತಮ್ಮೊಂದಿಗೆ ಕೈ ಜೋಡಿಸದ ಅವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು. ನಂತರ ಸಂಸತ್ತಿನ ಇಂದಿನ ಕಾರ್ಯಕಲಾಪಗಳ ಬಗ್ಗೆ ಮಾತಾಡಿದ ಶಿವಕುಮಾರ್, ಬಿಜೆಪಿ ಸಂಸದ ತೇಜಸ್ವೀ ಸೂರ್ಯ ಅವರಿಗೆ ಮಾತಾಡುವ ಅವಕಾಶ ನೀಡಲಾಯಿತೇ ಹೊರತು, ಡಿಕೆ ಸುರೇಶ್ ಗೆ ಅವಕಾಶವನ್ನೇ ಕೊಡಲಿಲ್ಲ, ರಾಜ್ಯದ ಸಮಸ್ಯೆಗಳನ್ನು ಮಂಡಿಸಲು ಕಾಂಗ್ರೆಸ್ ಗೆ ಅವಕಾಶವಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ