ಬಾನು ಮುಷ್ತಾಕ್​ಗೆ ಚಾಮುಂಡಿ ತಾಯಿಯ ಶಾಪ ತಟ್ಟಬಾರದು ಅಂದರೆ: ಬಸನಗೌಡ ಯತ್ನಾಳ್ ಹೀಗೆಂದಿದ್ದೇಕೆ ನೋಡಿ

Updated on: Sep 04, 2025 | 2:48 PM

ಬಸನಗೌಡ ಪಾಟೀಲ್ ಯತ್ನಾಲ್ ಅವರು ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ 2025ರ ಉದ್ಘಾಟನಾ ಕಾರ್ಯಕ್ರಮದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ. ಯತ್ನಾಲ್ ಅವರ ಪ್ರಕಾರ, ಚಾಮುಂಡಿ ದೇವಿಯ ಪೂಜೆ ಸನಾತನ ಧರ್ಮದ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಯುತ್ತದೆ. ಬಾನು ಮುಷ್ತಾಕ್ ಅವರ ಭಾಗವಹಿಸುವಿಕೆಯಿಂದ ಹಿಂದೂ ಧರ್ಮಕ್ಕೆ ಅಪಮಾನವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 4: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರಿಗೆ ಸರ್ಕಾರ ಅಧಿಕೃತ ಆಹ್ವಾನ ನೀಡಿರುವುದನ್ನು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಖಂಡಿಸಿದ್ದಾರೆ. ಅಲ್ಲದೆ, ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಸರಾ ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲ. ಸನಾತನ ಹಿಂದೂ ಧಾರ್ಮಿಕ ಆಚರಣೆ ಆಧಾರಿತ ಕಾರ್ಯಕ್ರಮ. ಚಾಮುಂಡಿ ದೇವಿಯ ಮೆರವಣಿಗೆಯನ್ನು ಪುಷ್ಪಾರ್ಚನೆ ಮಾಡಿ ಉದ್ಘಾಟಿಸಲಾಗುತ್ತದೆ. ಕನ್ನಡ ಬಾವುಟದ ಬಗ್ಗೆ, ಅರಶಿನ ಕುಂಕುಮದ ಬಗ್ಗೆ ಕೇವಲವಾಗಿ ಮಾತನಾಡಿದವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ಸಿಎಂ ಸಿದ್ದರಾಮಯ್ಯ ಸರ್ಕಾರದ ನಡೆ ಸರಿಯಿಲ್ಲ. ಚಾಮುಂಡಿ ತಾಯಿಯ ಶಾಪ ತಟ್ಟಬಾರದು ಅಂದರೆ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಯಿಂದ ಹೊರಗುಳಿಯುವುದು ಒಳ್ಳೆಯದು ಎಂದರು. ಯತ್ನಾಳ್ ಮಾತಿನ ವಿಡಿಯೋ ಇಲ್ಲಿದೆ.