AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್​ ಮನೆ ಮೇಲೆ ಪೊಲೀಸ್ ದಾಳಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್​ ಮನೆ ಮೇಲೆ ಪೊಲೀಸ್ ದಾಳಿ

ರಮೇಶ್ ಬಿ. ಜವಳಗೇರಾ
|

Updated on: Sep 04, 2025 | 3:37 PM

Share

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಮನೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ. ಎರಡ್ಮೂರು ದಿನ ವಿಚಾರಣೆ ನಡೆಸಿದರೂ ಸಹ ಸರಿಯಾದ ಮಾಹಿತಿ ಹಾಗೂ ಕಂಪ್ಯೂಟರ್ ಸೇರಿದಂತೆ ಇತರೆ ವಸ್ತುಗಳನ್ನು ತರದಿರುವ ಕಾರಣ ಪೊಲೀಸರು ಕೋರ್ಟ್​ ನಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದು, ಇಂದು (ಸೆಪ್ಟೆಂಬರ್ 04) ಬೆಂಗಳೂರಿನ ಬನ್ನೇರುಘಟ್ಟ ಸಮೀಪವಿರುವ ಸಮೀರ್ ಮನೆ ಮೇಲೆ SOCO ತಂಡದ ಸಮೇತ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು/ಮಂಗಳೂರು, (ಸೆಪ್ಟೆಂಬರ್ 04): ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಮನೆ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ. ಎರಡ್ಮೂರು ದಿನ ವಿಚಾರಣೆ ನಡೆಸಿದರೂ ಸಹ ಸರಿಯಾದ ಮಾಹಿತಿ ಹಾಗೂ ಕಂಪ್ಯೂಟರ್ ಸೇರಿದಂತೆ ಇತರೆ ವಸ್ತುಗಳನ್ನು ತರದಿರುವ ಕಾರಣ ಪೊಲೀಸರು ಕೋರ್ಟ್​ ನಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದು, ಇಂದು (ಸೆಪ್ಟೆಂಬರ್ 04) ಬೆಂಗಳೂರಿನ ಬನ್ನೇರುಘಟ್ಟ ಸಮೀಪವಿರುವ ಸಮೀರ್ ಮನೆ ಮೇಲೆ SOCO ತಂಡದ ಸಮೇತ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಅರೆಸ್ಟ್ ಮಾಡಲು ತೆರಳಿದ್ದಾಗ ಕಣ್ತಪ್ಪಿಸಿಕೊಂಡು ಮಂಗಳೂರು ಕೋರ್ಟ್​ ನಿಂದ ಜಾಮೀನು ಪಡೆದುಕೊಂಡು ಬಂಧನದಿಂದ ಪಾರಾಗಿದ್ದರು. ಆದ್ರೆ, ಇದೀಗ ಪೊಲೀಸರು ಸರ್ಚ್ ವಾರೆಂಟ್ ಪಡೆದು ಜಮೀರ್ ಮನೆಯಲ್ಲಿ ಶೋಧ ನಡೆಸಿದ್ದಾರೆ.