ಎಲ್ಲರನ್ನು ಟೀಕಿಸುವ ಬಸನಗೌಡ ಯತ್ನಾಳ್ ದಿಂಗಾಲೇಶ್ವರ ಸ್ವಾಮೀಜಿಯಿಂದ ಕಟು ಟೀಕೆಗೊಳಗಾದರು!
ದಿಂಗಾಲೇಶ್ವರ ಸ್ವಾಮಿ ಕೇವಲ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾರೆ ಅನ್ನೋದನ್ನು ಯತ್ನಾಳ್ ಅರ್ಥಮಾಡಿಕೊಳ್ಳಬೇಕು, ನಾವು ಸ್ವಾರ್ಥಕ್ಕಾಗಿ ಯಾವತ್ತೂ ಹೋರಾಟ ಮಾಡಿದವರಲ್ಲ. ಹಾಗಾಗಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡೋದು ಬೇಡ, ಅದು ಯತ್ನಾಳ್ ರಿಂದ ಸಾಧ್ಯವೂ ಇಲ್ಲ ಅಂತ ಸ್ವಾಮೀಜಿ ಹೇಳಿದರು.
ಗದಗ: ವಿರೋಧ ಪಕ್ಷದವರು, ತಮ್ಮ ಪಕ್ಷದವರು ಅನ್ನುವ ತಾರತಮ್ಯ ತೋರದೆ ಟೀಕಿಸುವ ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಬುಧವಾರದಂದು ಫಾರ್ ಎ ಚೇಂಜ್ ರಿಸೀವಿಂಗ್ ಎಂಡ್ ನಲ್ಲಿದ್ದರು. ಬಾಳೆ ಹೊಸೂರು ಮಠದ ಶ್ರೀಗಳಾಗಿರುವ ದಿಂಗಾಲೇಶ್ವರ ಸ್ವಾಮೀಜಿ (Dingaleshwara Swamiji) ಅವರು ಯತ್ನಾಳ್ ಅವರ ಬಗ್ಗೆ ಆಡಿರುವ ಮಾತುಗಳನ್ನು ಕೇಳಿದರೆ ಶಾಸಕರು ಕನಿಷ್ಟ ಒಂದು ವರ್ಷದವರೆಗೆ ಮಾಧ್ಯಮಗಳ (media) ಕೆಮೆರಾ ಮುಂದೆ ಬರಲಾರರು. ಯತ್ನಾಳ್ ಅವರ ವ್ಯಕ್ತಿತ್ತವನ್ನು ಸ್ವಾಮೀಜಿ ಶಾಂತವಾಗಿ, ಬಹಳ ಸ್ಪಷ್ಟವಾದ ಶಬ್ದಗಳಲ್ಲಿ ಬಿಚ್ಚಿಟ್ಟಿದ್ದಾರೆ. ಯಾವುದೇ ಮಾತಾಡುವ ಮೊದಲು ಏನು ಮಾತಾಡುತ್ತಿದ್ದೇನೆ ಎಂಬ ಅರಿವು ಮಾತಾಡುವವನಿಗೆ ಇರಬೇಕು ಅಂತ ಸ್ವಾಮೀಜಿ ಹೇಳುತ್ತಾರೆ.
ಹಿಂದೆ, ಬಿಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದಾಗ ಅವರ ಪರ ನಿಂತಿದ್ದು ನಿಜ, ಅವರನ್ನು ಯಾಕೆ ಕೆಳಗಿಳಿಸಲಾಗುತ್ತಿದೆ ಅಂತ ನಾವು ಕೇಳಿದ್ದೆವು, ಅಂದು ಸುಮಾರು 500 ಮಠಾಧೀಶರು ಸೇರಿ ಹೋರಾಟ ನಡೆಸಿದ್ದರಿಂದಲೇ ಲಿಂಗಾಯತ ಸಮುದಾಯದ ಒಬ್ಬ ಮುಖ್ಯಮಂತ್ರಿ ಸಿಗೋದು ಸಾಧ್ಯವಾಯಿತು ಎಂದು ಶ್ರೀಗಳು ಹೇಳಿದರು.
ಮೊದಲೆಲ್ಲ ಯತ್ನಾಳ್ ಅವರು ಯಡಿಯೂರಪ್ಪನವರ ಹಿಂಬಾಲಕರಾಗಿದ್ದರು, ಈಗ ಅವರ ವಿರೋಧಿಗಳಾಗಿ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆ. ಯತ್ನಾಳ್ ರಾಜಕೀಯದಲ್ಲಿ ಬೆಳೆದಿದ್ದೇ ಯಡಿಯೂರಪ್ಪನವರಿಂದ ಆದರೆ ಈಗ ಅವರ ಹಿಂದೆ ಕತ್ತಿ ಮಸೆಯುತ್ತಿದ್ದಾರೆ. ಯಡಿಯೂರಪ್ಪನವರ ವ್ಯಕ್ತಿತ್ವ, ಯತ್ನಾಳ್ ವ್ಯಕ್ತಿತ್ವ ಮತ್ತು ಬಾಳೆ ಹೊಸೂರು ಸ್ವಾಮಿಗಳ ವ್ಯಕ್ತಿತ್ವ ಎಂಥದೆಂದು ನಾಡಿನ ಜನತೆಗೆ ಗೊತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಯತ್ನಾಳ್ ಬಣ್ಣ ಬದಲಾಯಿಸುತ್ತಾರೆ ಎಂದು ಸ್ವಾಮೀಜಿ ಸೂಚ್ಯವಾಗಿ ಹೇಳಿದರು.
ದಿಂಗಾಲೇಶ್ವರ ಸ್ವಾಮಿ ಕೇವಲ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾರೆ ಅನ್ನೋದನ್ನು ಯತ್ನಾಳ್ ಅರ್ಥಮಾಡಿಕೊಳ್ಳಬೇಕು, ನಾವು ಸ್ವಾರ್ಥಕ್ಕಾಗಿ ಯಾವತ್ತೂ ಹೋರಾಟ ಮಾಡಿದವರಲ್ಲ. ಹಾಗಾಗಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡೋದು ಬೇಡ, ಅದು ಯತ್ನಾಳ್ ರಿಂದ ಸಾಧ್ಯವೂ ಇಲ್ಲ ಅಂತ ಸ್ವಾಮೀಜಿ ಹೇಳಿದರು.
ತಾವೊಬ್ಬ ಸನ್ಯಾಸಿಯಾಗಿ, ಮಠಾಧೀಶನಾಗಿ ಉತ್ತರ ಕರ್ನಾಟಕದ ಅಭ್ಯುದಯಕ್ಕಾಗಿ ಹೋರಾಟ ಮಾಡಿದ್ದು ಅಂತ ಯತ್ನಾಳ್ ಗೆ ಅರ್ಥವಾಗದೆ ಹೋಗಿದ್ದು ವಿಷಾದಕರ ಎಂದು ಶ್ರೀಗಳು ಹೇಳಿದರು.