ಮತ್ತೊಮ್ಮೆ ಉತ್ತರ ಕರ್ನಾಟಕದ ಬಿಜೆಪಿ ಶಾಸಕ ಮುಖ್ಯಮಂತ್ರಿಯಾಗುವ ಪ್ರಸ್ತಾಪ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್!
ಬಸನಗೌಡ ಪಾಟೀಲ್ ಯತ್ನಾಳ್ ನಿಸ್ಸಂದೇಹವಾಗಿ ಒಬ್ಬ ಜನಪ್ರಿಯ ನಾಯಕ ಮತ್ತು ಮಾಸ್ ಲೀಡರ್. ರಾಜ್ಯದ ಯಾವುದೇ ಮೂಲೆಗೆ ಅವರು ಹೋದರೂ ಜನ ಸೇರುತ್ತಾರೆ. ತಮ್ಮ ಇತ್ತೀಚಿನ ಎಲ್ಲ ಭಾಷಣಗಳಲ್ಲಿ ಅವರು ಬಿಜೆಪಿಯ ಅಭ್ಯರ್ಥಿಗಾಗಿ ವೋಟು ಕೇಳುವುದಕ್ಕಿಂತ ಜಾಸ್ತಿ, ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದು ತಾನು ಮುಖ್ಯಮಂತ್ರಿಯಾಗುವ ಬಗ್ಗೆ ಮಾತಾಡುತ್ತಿದ್ದಾರೆ.
ಚಿಕ್ಕೋಡಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಸೋಮವಾರದಂದು ಲೋಕಸಭಾ ಚುನಾವಣಾ (Lok Sabha polls) ಪ್ರಚಾರ ಭಾಷಣದಲ್ಲಿ ವಿಧಾನಸಭಾ ಚುನಾವಣೆಯ (Assembly polls) ಬಗ್ಗೆಯೇ ಹೆಚ್ಚು ಮಾತಾಡಿದರು. ಇಂಗ್ಲಿಷ್ ನಲ್ಲಿ ಪ್ಲೇಯಿಂಗ್ ಟು ದಿ ಗ್ಯಾಲರಿ ಅನ್ನುತ್ತಾರಲ್ಲ, ಹಾಗಿತ್ತು ಅವರ ಭಾಷಣದ ಪ್ರವರ. ಈ ಬಾರಿಯ ಲೋಕಸಭಾ ಚುನಾವಣೆ ಮುಗಿದ ಕೆಲ ದಿನಗಳಲ್ಲೇ ವಿಧಾನಸಭಾ ಚುನಾವಣೆ ನಡೆಯಬಹುದು. ಆಗ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳಿಂದಲೇ ಹೆಚ್ಚು ಬಿಜೆಪಿ ನಾಯಕರು ಶಾಸಕರಾಗಿ ಆಯ್ಕೆಯಾಗಲಿದ್ದಾರೆ. ಉತ್ತರ ಕರ್ನಾಟಕದಿಂದ ಹೆಚ್ಚು ಶಾಸಕರು ಆಯ್ಕೆಯಾದರೆ ಮುಖ್ಯಮಂತ್ರಿ ಯಾರಾಗಬೇಕು ಎಂದು ಯತ್ನಾಳ್ ಜನರನ್ನು ಕೇಳುತ್ತಾರೆ. ಜನರೆಲ್ಲ ಯತ್ನಾಳ್ ಆಗಬೇಕು ಅಂತ ಒಕ್ಕೊರಲಿನಿಂದ ಕೂಗುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ನಿಸ್ಸಂದೇಹವಾಗಿ ಒಬ್ಬ ಜನಪ್ರಿಯ ನಾಯಕ ಮತ್ತು ಮಾಸ್ ಲೀಡರ್. ರಾಜ್ಯದ ಯಾವುದೇ ಮೂಲೆಗೆ ಅವರು ಹೋದರೂ ಜನ ಸೇರುತ್ತಾರೆ. ತಮ್ಮ ಇತ್ತೀಚಿನ ಎಲ್ಲ ಭಾಷಣಗಳಲ್ಲಿ ಅವರು ಬಿಜೆಪಿಯ ಅಭ್ಯರ್ಥಿಗಾಗಿ ವೋಟು ಕೇಳುವುದಕ್ಕಿಂತ ಜಾಸ್ತಿ, ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದು ತಾನು ಮುಖ್ಯಮಂತ್ರಿಯಾಗುವ ಬಗ್ಗೆ ಮಾತಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಟಿಪ್ಪುವಿನ ಅವತಾರವೇ ಸಿದ್ದರಾಮಯ್ಯ: ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ