Assembly Session; ಪ್ರತಿ ವಿಷಯಕ್ಕೆ ರಾಜಕೀಯದ ಲೇಪ ಹಾಕುವುದು ಬಸನಗೌಡ ಯತ್ನಾಳ್ ಜಾಯಮಾನ: ಸಿದ್ದರಾಮಯ್ಯ, ಮುಖ್ಯಮಂತ್ರಿ
ನಾಳೆ ಸದನದಲ್ಲಿ ಗೃಹ ಸಚಿವರು ಪ್ರಕರಣದ ಬಗ್ಗೆ ಮಾತಾಡಲಿದ್ದಾರೆ ಮತ್ತು ಅಗತ್ಯ ಬಿದ್ದರೆ ತಾವು ಕೂಡ ಮಾತಾಡುವುದಾಗಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ವಿಧಾನ ಮಂಡಲ ಇಂದಿನ ಕಾರ್ಯಕಲಾಪಗಳಲ್ಲಿ ಜೈನಮುನಿ ಕಾಮಕುಮಾರನಂದಿ ಮಹಾರಾಜ (Kamakumara Nandi Maharaj) ಅವರ ಹತ್ಯೆಯ ಬಗ್ಗೆಯೇ ಹೆಚ್ಚು ಚರ್ಚೆಯಾಯಿತು. ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಉತ್ತರ ನೀಡಲು ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಪ್ರತಿಪಕ್ಷದ ನಾಯಕರು ಅತ್ಯಂತ ಖಂಡನೀಯವಾದ ಹತ್ಯೆ ಪ್ರಕರಣಕ್ಕೆ ರಾಜಕೀಯ ಬೆರೆಸಿ ಮಾತಾಡಿದ್ದಾರೆ ಎಂದು ಹೇಳಿದರು. ತಾವು ಹತ್ಯೆಯನ್ನು ಉಗ್ರವಾಗಿ ಖಂಡಿಸಿರುವುದಾಗಿ ಹೇಳಿದ ಮುಖ್ಯಮಂತ್ರಿ, ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಗೆ ಪ್ರತಿ ವಿಷಯದಲ್ಲಿ ರಾಜಕೀಯ ಬೆರಸದೆ ಮಾತಾಡುವುದು ಸಾಧ್ಯವಿಲ್ಲ ಎಂದರು. ಗೃಹ ಸಚಿವ ಜಿ ಪರಮೇಶ್ವರ್ ಅವರು ತನಿಖೆಯ ಮುಂದಾಳತ್ವ ವಹಿಸಿಕೊಂಡು ಹುಬ್ಬಳ್ಳಿಗೆ ಹೋಗಿದ್ದಾರೆ, ಅಲ್ಲಿಂದ ಅವರ ಚಿಕ್ಕೋಡಿಗೂ ಹೋಗುತ್ತಾರೆ ಎಲ್ಲ ಕಡೆಯಿಂದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಇವತ್ತು ಸಾಯಂಕಾಲ ರಾಜಧಾನಿಗೆ ವಾಪಸ್ಸಾಗಲಿದ್ದಾರೆ. ನಾಳೆ ಸದನದಲ್ಲಿ ಅವರು ಪ್ರಕರಣದ ಬಗ್ಗೆ ಮಾತಾಡಲಿದ್ದಾರೆ ಮತ್ತು ಅಗತ್ಯ ಬಿದ್ದರೆ ತಾವು ಕೂಡ ಮಾತಾಡುವುದಾಗಿ ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ