Karnataka Assembly Session: ಸದನದಲ್ಲಿ ಬಸನಗೌಡ ಯತ್ನಾಳ್ ಮತ್ತು ಜಮೀರ್ ಅಹ್ಮದ್ ನಡುವೆ ಸೇರಿಗೆ ಸವ್ವಾಸೇರು ವಾಗ್ವಾದ

|

Updated on: Dec 13, 2024 | 7:58 PM

Karnataka Assembly Session: ಯತ್ನಾಳ್ ಪ್ರತಿ ಮಾತಿಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದ ಜಮೀರ್ ಅಹ್ಮದ್, ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳು ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಿನಿಂದಲೂ ಜಾರಿಯಲ್ಲಿವೆ, ಆದರೆ ಅಗಲೂ ಶಾಸಕರಾಗಿದ್ದ ಯತ್ನಾಳ್ ಯಾಕೆ ಈಗ ಕೇಳುತ್ತಿರುವ ಪ್ರಶ್ನೆಗಳನ್ನು ಎತ್ತಲಿಲ್ಲ? ಸಿದ್ದರಾಮಯ್ಯ ವಿಜಯಪುರದ ರಿವ್ಯೂ ಮೀಟಿಂಗಲ್ಲಿ ಒತ್ತುವರಿ ಅಗಿರುವ ವಕ್ಫ್ ಆಸಸ್ತಿಗಳನ್ನು ತೆರವು ಮಾಡಿಸಲಷ್ಟೇ ಸೂಚನೆ ನೀಡಿದ್ದರು ಎಂದು ಹೇಳಿದರು.

ಬೆಳಗಾವಿ: ವಿಧಾನಸಭಾ ಅಧಿವೇಶನದಲ್ಲಿ ಇಂದು ವಕ್ಫ್ ಮೇಲೆ ವಿಸ್ತೃತ ಚರ್ಚೆ ನಡೆಯುವುದರ ಜೊತೆಗೆ ಸಚಿವ ಸಚಿವ ಜಮೀರ್ ಅಹ್ಮದ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಜುಗಲ್​ಬಂದಿಯೂ ನಡೆಯಿತು. ವಿಜಯಪುರ ಜಿಲ್ಲೆ ಪಡಗಾನೂರಲ್ಲಿರುವ ಸೋಮೇಶ್ವರ ದೇವಸ್ಥಾನ, ವಿಜಯಪುರ ನಗರದಲ್ಲಿರುವ ಡಿಸಿ ಮನೆ, ಪೊಲೀಸ್ ಕ್ವಾರ್ಟರ್ಸ್ ಇನ್ನೂ ಹಲವಾರು ಆಸ್ತಿಗಳನ್ನು ವಕ್ಫ್ ತನ್ನದೆನ್ನುತ್ತಿದೆ ಎಂದು ಹೇಳಿದ ಯತ್ನಾಳ್ ವಿಜಯಪುರದಲ್ಲಿ ನಡೆದ ಸಭೆಯೊಂದರಲ್ಲಿ ಸಿದ್ದರಾಮಯ್ಯ ಹೇಗೆ ಜಮೀರ್ ಅಹ್ಮದ್ ಗೆ ಆದೇಶ ನೀಡಿದರೆನ್ನುವುದನ್ನು ಮಿಮಿಕ್ರಿ ಮಾಡಿ ತೋರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪಂಚಮಸಾಲಿ ಮೀಸಲಾತಿ ಹೋರಾಟ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಣ್ಣ ಬಯಲಾಗಿದೆ: ಬಸನಗೌಡ ಯತ್ನಾಳ್