Loading video

ಬಸನಗೌಡ ಯತ್ನಾಳ್​ಗೆ ಯಾವ ಧರ್ಮದ ಬಗ್ಗೆಯೂ ಆದರಣೆ, ನಿಷ್ಠೆ ಇಲ್ಲ: ವಿಜಯಾನಂದ ಕಾಶಪ್ಪನವರ್

Updated on: Apr 28, 2025 | 4:21 PM

ತಾನು ಸತ್ತರೆ ಕಾಂಗ್ರೆಸ್ ಕಚೇರಿ ಮುಂದಿನಿಂದ ದೇಹ ಕೂಡ ಸಾಗಿಸೋದು ಬೇಡ ಎಂದು ಯತ್ನಾಳ್ ಹೇಳುತ್ತಾರೆ, ಅವರನ್ನು ಕಾಂಗ್ರೆಸ್ ಗೆ ಯಾರೂ ಅಹ್ವಾನಿಸಿಲ್ಲ, ಜೆಡಿಎಸ್ ಪಕ್ಷದಲ್ಲಿದ್ದಾಗ ಮುಸಲ್ಮಾನರ ವೋಟು ಹಾಕಿಸಿಕೊಂಡ ಯತ್ನಾಳ್, ಟಿಪ್ಪು ಸುಲ್ತಾನ್ ಖಡ್ಗ ಹಿಡಿದು ಕುಣಿದಾಡಿದ್ದರು, ಟಿಪ್ಪು, ಪ್ರವಾದಿ ಮೊಹಮ್ಮದ್ ಮತ್ತು ಅಣ್ಣ ಬಸವಣ್ಣ ಬಗ್ಗೆ ಯತ್ನಾಳ್ ಗೆ ಏನಾದರೂ ಗೊತ್ತಿದೆಯಾ? ಎಂದು ಕಾಶಪ್ಪನವರ್ ಪ್ರಶ್ನಿಸಿದರು.

ವಿಜಯಪುರ, ಏಪ್ರಿಲ್ 28: ನಗರದಲ್ಲಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ಮುಸ್ಲಿಂ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತಾಡಿದ ಹುನುಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಯತ್ನಾಳ್ ಯಾವುದೇ ಧರ್ಮ, ಸಮುದಾಯದ ಬಗ್ಗೆ ಗೌರವ ಇಲ್ಲ, ಬಾಯಿಗೆ ಬಂದಿದ್ದನ್ನೆಲ್ಲ ಮಾತಾಡುವುದೇ ಇವರು ರಾಜಕೀಯ ಎಂದುಕೊಂಡಿದ್ದಾರೆ ಎನ್ನುತ್ತಾ ಮನಸ್ಸಿಗೆ ಬಂದಂತೆ ಬೈದಾಡಿದರು. ಹನ್ನೆಡನೇ ಶತಮಾನದಲ್ಲಿ ಸಮಾನತೆ, ಸಹಬಾಳ್ವೆಯ ಬಗ್ಗೆ ಸಾರಿದ ಅಣ್ಣ ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುತ್ತಾರೆ, 1,400 ವರ್ಷಗಳ ಅದನ್ನೇ ಸಾರಿದ ಪ್ರವಾದಿ ಮೊಹಮ್ಮದ್ ಅವರನ್ನು ಕುರಿತು ಸಹ ಕೆಟ್ಟದ್ದಾಗಿ ಮಾತಾಡುತ್ತಾರೆ, ಇವರ ಮಾತು ಕೇಳುತ್ತಿದ್ದರೆ ವಿನಾಶ ಕಾಲೇ ವಿಪರೀತ ಬುದ್ಧಿ ಅನ್ನೋದು ಸತ್ಯವೆನಿಸುತ್ತದೆ ಎಂದು ಕಾಶಪ್ಪನವರ್ ಹೇಳಿದರು.

ಇದನ್ನೂ ಓದಿ:  ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಕಾವಿ ಸಾಕಾಗಿದೆ, ಖಾದಿ ಬೇಕಾಗಿದೆ: ವಿಜಯಾನಂದ್ ಕಾಶಪ್ಪನವರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ