ಯಡಿಯೂರಪ್ಪರಿಗೆ ವಯಸ್ಸಾಯ್ತು ಎನ್ನುವ ಬಸನಗೌಡ ಯತ್ನಾಳ್ ಇನ್ನೂ ಯುವಕನೇ? ರೇಣುಕಾಚಾರ್ಯ
ಬಸನಗೌಡ ಪಾಟೀಲ್ ಯತ್ನಾಳ್ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದು, ಟಿಪ್ಪರ್ ಡ್ರೈವರ್ ಆಗಿ ದುಡಿದಿದ್ದು, ಎಲ್ಲ ತನಗೆ ಗೊತ್ತಿದೆ, ವಿಜಯಪುರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಯತ್ನಾಳ್ ಮಕ್ಕಳು ಭಾಗಿಯಾಗುತ್ತಿರುವ ಸಂಗತಿ ಗೊತ್ತಿದೆ, ಸಿದ್ದೇಶ್ವರ್ ಸಹಕಾರ ಸಂಸ್ಥೆಯಲ್ಲಿ ಅವರ ಮಗನೊಬ್ಬನನ್ನು ನಿರ್ದೇಶಕನಾಗಿ ಸೇರಿಸಿದ್ದು ತಮ್ಮ ಗಮನಕ್ಕೆ ಬಂದಿದೆ ಎಂದು ರೇಣುಕಾಚಾರ್ಯ ಹೇಳಿದರು.
ಬೆಂಗಳೂರು: ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತಾಡಿದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಮತ್ತೊಮ್ಮೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ತರಾಟೆಗೆ ತೆಗೆದುಕೊಂಡರು. ನಿನ್ನೆ ದೆಹಲಿಯಲ್ಲಿ ಮಾತಾಡಿರುವ ಯತ್ನಾಳ್, ಯಡಿಯೂರಪ್ಪವರಿಗೆ ವಯಸ್ಸಾಗಿದೆ, ಅವರು ಮಕ್ಕಳು ಮೊಮ್ಮಕ್ಕಳೊಂದಿಗೆ ಅಡುತ್ತಾ ನೂರು ವರ್ಷ ಬದುಕಲಿ, ರಾಜಕಾರಣ ಅವರಿಗೆ ಬೇಡ ಅಂತ ಹೇಳಿದ್ದಾರೆ. ಹಾಗಾದರೆ ಯತ್ನಾಳ್ ಗೆ ವಯಸ್ಸಾಗಿಲ್ವ, ವಿಜಯಪುರದಲ್ಲಿ ಅವರು ಹೇಗೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಅಂತ ಅಲ್ಲಿನ ಕಾರ್ಯಕರ್ತರು ವಾಟ್ಸ್ಯಾಪ್ ಸಂದೇಶಗಳನ್ನು ತಮಗೆ ಕಳಿಸಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾಡಿನ ಸ್ವಾಮೀಜಿಗಳನ್ನು ಅವಮಾನಿಸಿರುವ ಯತ್ನಾಳ್ ಕ್ಷಮೆ ಕೇಳಬೇಕು: ಎಂಪಿ ರೇಣುಕಾಚಾರ್ಯ