ವಿಜಯಪುರದಲ್ಲಿ ಜನಾಕ್ರೋಶ ಯಾತ್ರೆ ಭರ್ಜರಿ ಯಶಸ್ಸಿಗೆ ಬಸನಗೌಡ ಯತ್ನಾಳ್ ವಿರೋಧಿಗಳ ಪ್ಲ್ಯಾನ್!

ಅರುಣ್​ ಕುಮಾರ್​ ಬೆಳ್ಳಿ

Updated on: Apr 16, 2025 | 11:20 AM

ವಿಜಯಪುರ ಯತ್ನಾಳ್ ಪ್ರತಿನಿಧಿಸುವ ಕ್ಷೇತ್ರವಾಗಿದೆ, ನಗರದಲ್ಲಿ ಅವರ ಶಕ್ತಿ ಏನೂ ಇಲ್ಲ ಅನ್ನೋದನ್ನು ಸಾಬೀತು ಮಾಡಬೇಕಿದೆ, ವಿಜಯಪುರದಿಂದಲೇ ಕನಿಷ್ಠ ಐದು ಸಾವಿರ ಜನ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇದೆ, ಆದರೆ ಜಿಲ್ಲೆಯ ಬೇರೆ ಭಾಗಗಳಿಂದಲೂ ಕಾರ್ಯಕರ್ತರನ್ನು ಸೇರಿಸೋಣ ಮತ್ತು ಯಾತ್ರೆಯನ್ನು ಭಾರೀ ಯಶಗೊಳಿಸೋಣ ಎಂದು ಪಟ್ಟಣಶೆಟ್ಟಿ ಕರೆ ನೀಡಿದರು.

ವಿಜಯಪುರ, ಏಪ್ರಿಲ್ 16: ನಗರದಲ್ಲಿ ಬಿಜೆಪಿಯ ಜನಾಕ್ರೋಶ ಯಾತ್ರೆ ನಾಳೆ ಸಾಯಂಕಾಲ ನಡೆಯಲಿದ್ದು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೊರತಾಗಿಯೂ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದು ರಾಜ್ಯ ಮತ್ತು ರಾಷ್ಟ್ರ ನಾಯಕತ್ವಕ್ಕೆ ತೋರಿಸಲು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ (Appu Pattanshetty) ಅವರ ಮುಂದಾಳತ್ವದಲ್ಲಿ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆದು ಮಾತಾಡಿದ ಪಟ್ಟಣಶೆಟ್ಟಿ, ಜನಾಕ್ರೋಶ ಯಾತ್ರೆಗೆ ಭರ್ಜರಿ ಯಶ ಕೊಡಿಸಿ, ಬಿಜೆಪಿ ವರಿಷ್ಠರಿಗೆ ಹೋಗಿರುವ ತಪ್ಪು ಸಂದೇಶವನ್ನು ನಿವಾರಿಸೋಣ ಎಂದು ಹೇಳಿದರು.

ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ವಿರುದ್ಧ ಕೋಲಾರ ಮುಸಲ್ಮಾನರಿಂದ ಪ್ರತಿಭಟನೆ, ಬಂಧನಕ್ಕೆ ಆಗ್ರಹ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.