ಜನತಾ ದಳದಲ್ಲಿದ್ದಾಗ ಮುಸಲ್ಮಾನರನ್ನು ಓಲೈಸುತ್ತಿದ್ದ ಬಸನಗೌಡ ಯತ್ನಾಳ್ ಬಿಜೆಪಿಗೆ ಪುನರ್ ಪ್ರವೇಶ ಪಡೆದು ದ್ವೇಷಿಸುತ್ತಿದ್ದಾರೆ: ಎಂಬಿ ಪಾಟೀಲ್

ಜನತಾ ದಳದಲ್ಲಿದ್ದಾಗ ಮುಸಲ್ಮಾನರನ್ನು ಓಲೈಸುತ್ತಿದ್ದ ಬಸನಗೌಡ ಯತ್ನಾಳ್ ಬಿಜೆಪಿಗೆ ಪುನರ್ ಪ್ರವೇಶ ಪಡೆದು ದ್ವೇಷಿಸುತ್ತಿದ್ದಾರೆ: ಎಂಬಿ ಪಾಟೀಲ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 09, 2023 | 7:38 PM

ಬಸನಗೌಡ ಪಾಟೀಲ್ ಮತ್ತು ತಾನು ಬಸವನ ನಾಡು ಎಂದು ಕರೆಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದವರು ಎಂದು ಸಚಿವ ಪಾಟೀಲ್ ಹೇಳುತ್ತಾರೆ. ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ್ದ ಅನುಭವ ಮಂಟಪದಲ್ಲಿ ಇಸ್ಲಾಂ ಧರ್ಮದವರಾದಿಯಾಗಿ ಎಲ್ಲ ಸಮುದಾಯಗಳ ಜನ ಭಾಗವಹಿಸಿ ವಿಚಾರ ವಿಮರ್ಶೆ ನಡೆಸುತ್ತಿದ್ದರು, ಸಾವಿರ ವರ್ಷಗಳಷ್ಟು ಹಿಂದೆ ಇರದ ಸಮುದಾಯಗಳ ಬಗ್ಗೆ ದ್ವೇಷ ಈಗ ಯಾಕೆ ಎಂದು ಸಚಿವರ ಪ್ರಶ್ನಿಸುತ್ತಾರೆ.

ವಿಜಯಪುರ: ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ (MB Patil) ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಒಂದೇ ಜಿಲ್ಲೆಯವರು ಮತ್ತು ಒಂದೇ ಸಮುದಾಯಕ್ಕೆ (community) ಸೇರಿದವರು. ಪ್ರಾಯಶಃ ಇದೇ ಕಾರಣಕ್ಕೆ ಅವರ ನಡುವೆ ಆರೋಪ-ಪ್ರತ್ಯಾಪರೋಪಗಳ ಸಮರ ನಡೆಯಲ್ಲ. ಆದರೆ ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಸಚಿವ ಪಾಟೀಲ್ ಯತ್ನಾಳ್ ಅವರನ್ನು ಭರಪೂರ ಟೀಕಿಸಿದರು. ಮುಸ್ಮಿಂ ಸಮುದಾಯವನ್ನು ದ್ವೇಷಿಸುವ ಬಿಜೆಪಿ ಶಾಸಕ ಜನತಾ ದಳ ಪಕ್ಷದಲ್ಲಿದ್ದಾಗ ಅವರನ್ನು ಓಲೈಸಿಕೊಂಡು ಓಡಾಡುತ್ತಿದ್ದರು, ಅವರ ಕಾರ್ಯಕ್ರಮಗಳಲ್ಲಿ ಖುಷಿಖುಷಿಯಾಗಿ ಭಾಗಿಯಾಗುತ್ತ್ತಿದ್ದರು. ಆದರೆ, ಬಿಜೆಪಿಯಲ್ಲಿ ರೀ-ಎಂಟ್ರಿ ಪಡೆದ ಬಳಿಕ ಹಿಂದೂಗಳ ಹುಲಿಯೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು. ಆದರೆ ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಅಶಯದ ಹಾಗೆ, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ-ಎಲ್ಲ ಧರ್ಮದವರನ್ನು ಗೌರವಿಸುತ್ತದೆ ಮತ್ತು ಎಲ್ಲ ಸಮುದಾಯದವರಿಗೆ ಸಮಾನ ಅವಕಾಶ ಕಲ್ಪಿಸುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸಲ್ಮಾನರ ದೊಡ್ಡ ಕಾಣಿಕೆ ಇದೆ ಎಂದು ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ