2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

| Updated By: ರಾಜೇಶ್ ದುಗ್ಗುಮನೆ

Updated on: Apr 24, 2022 | 7:46 PM

ಕಾರಣಾಂತರಗಳಿಂದ ಈ ಕಾರ್ಯಕ್ರಮ ಮುಂದೂಡಲ್ಪಡುತ್ತಲೇ ಇತ್ತು.  ರಾಜ್​ಕುಮಾರ್ ಜನ್ಮದಿನವೇ ಈ ಸಮಾರಂಭ ನಡೆಯುತ್ತಿರುವುದು ವಿಶೇಷ.

2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ  ಪ್ರದಾನ ಕಾರ್ಯಕ್ರಮ ಇಂದು (ಏಪ್ರಿಲ್ 24) ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದಾರೆ. ‘ಶುದ್ಧಿ (ಪ್ರಥಮ)’, ‘ಮಾರ್ಚ್ 22’ (ದ್ವಿತೀಯ), ಪಡ್ಡಾಯಿ (ತುಳು) (ತೃತೀಯ) ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ‘ಹೆಬ್ಬಟ್ ರಾಮಕ್ಕ’ ಸಿನಿಮಾ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೊರಹೊಮ್ಮಿದೆ. ಪುನೀತ್ ರಾಜ್​ಕುಮಾರ್ ನಟನೆಯ ‘ರಾಜಕುಮಾರ’ ಸಿನಿಮಾ (Rajakumara Movie) ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ಹೊರಹೊಮ್ಮಿದ್ದು, ಈ ಚಿತ್ರಕ್ಕೂ ಪ್ರಶಸ್ತಿ ಸಿಗಲಿದೆ. ಕಾರಣಾಂತರಗಳಿಂದ ಈ ಕಾರ್ಯಕ್ರಮ ಮುಂದೂಡಲ್ಪಡುತ್ತಲೇ ಇತ್ತು.  ರಾಜ್​ಕುಮಾರ್ ಜನ್ಮದಿನವೇ ಈ ಸಮಾರಂಭ ನಡೆಯುತ್ತಿರುವುದು ವಿಶೇಷ.

ಇದನ್ನೂ ಓದಿ: ಕನ್ನಡದ ಪ್ರಶ್ನೆ ಬಂದಾಗ ಹೋರಾಟ ಮಾಡೇ ಮಾಡುತ್ತೇನೆ ಎಂದರು ಶಿವರಾಜಕುಮಾರ್!

 ‘ಅಣ್ಣ ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ’; ರಾಜ್​ಕುಮಾರ್ ನೆನೆದು ಸಹೋದರಿ ನಾಗಮ್ಮ ಕಣ್ಣೀರು