ಈಜುಕೊಳವನ್ನು ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅದರಲ್ಲಿ ಧುಮುಕಿ ಈಜಿದರು!!
ಯತ್ನಾಳ್ ಬಟ್ಟೆ ಬಿಚ್ಚಿ ನೀರಿಗೆ ಧುಮುಕಿದರು ಮತ್ತು ಕೊಳದ ಒಂದು ದಡದಿಂದ ಮತ್ತೊಂದು ದಡಕ್ಕೆ ಸುಲಭವಾಗಿ ಈಜಿದರು. ಶಾಸಕರು ಈಜುವುದನ್ನು ನೋಡಿದ ಜನ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಆನಂದಿಸಿದರು. ಯತ್ನಾಳ್ ಕಟ್ಟುಮಸ್ತಾದ ಆಳು. ಎತ್ತರಕ್ಕಿದ್ದಾರೆ ಮತ್ತು ಅದಕ್ಕೆ ತಕ್ಕನಾದ ದೇಹದಾರ್ಢ್ಯವನ್ನೂ ಹೊಂದಿದ್ದಾರೆ.
ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basnagouda Patil Yatnal) ಅವರು ಶುಕ್ರವಾರವಿಡೀ ತಮ್ಮ ಕ್ಷೇತ್ರದಲ್ಲಿ ಬ್ಯೂಸಿಯಾಗಿದ್ದರು. ಮೊದಲು ಮಾಧ್ಯಮದವರೊಂದಿಗೆ ಮಾತಾಡಿ ಕಾಂಗ್ರೆಸ್ ಮತ್ತು ತಮ್ಮ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು. ನಿರ್ದಿಷ್ಟವಾಗಿ ಅವರು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರನ್ನು ಟಾರ್ಗೆಟ್ ಮಾಡಿ ಟೀಕೆಗಳನ್ನು ಮಾಡಿದರು. ಅತ್ತ ಬೆಂಗಳೂರಿನಲ್ಲಿ ಶಿವಕುಮಾರ ಅವರ ಪ್ರತಿಕ್ರಿಯೆ ಕೇಳಿದರೆ ಮೆಂಟಲ್ ಗಿರಾಕಿಗಳ ಟೀಕೆಗೆಲ್ಲ ನಾನು ಉತ್ತರಿಸುವುದಿಲ್ಲ ಎನ್ನುತ್ತಾರೆ. ಆದರೆ, ಯತ್ನಾಳ್ ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಪದಗಳನ್ನು ಬಳಸಿ ಟೀಕಾಸ್ತ್ರಗಳನ್ನು ಪ್ರಯೋಗಿಸಿದ್ದಾರೆ.
ಬಿಡಿ, ಇವತ್ತು ದಿನವಿಡೀ ಅದನ್ನು ಚರ್ಚಿಸಿಯಾಗಿದೆ. ಟೀಕೆ ಮತ್ತು ಜರಿಯುವುದನ್ನು ಬಿಟ್ಟು ಯತ್ನಾಳ್ ಬೇರೆ ಕೆಲಸಗಳನ್ನೂ ಮಾಡಿದರು. ಅವುಗಳಲ್ಲಿ ಒಂದು, ನಗರದಲ್ಲಿ ಈಜುಕೊಳವೊಂದನ್ನು ಉದ್ಘಾಟಿಸಿದ್ದು. ಸ್ವಿಮ್ಮಿಂಗ್ ಪೂಲ್ ಉದ್ಘಾಟಿಸಬೇಕೆಂದರೆ ಅದರಲ್ಲಿ ಧುಮುಕಿ ಇಲ್ಲವೇ ಡೈವ್ ಹೊಡೆದು ಈಜಬೇಕು ಅಂತೇನಿಲ್ಲ. ಆದರೆ, ಯತ್ನಾಳ್ಗೆ ಈಜುವುದು ಗೊತ್ತು.
ಹಾಗಾಗೇ, ಅವರು ಬಟ್ಟೆ ಬಿಚ್ಚಿ ನೀರಿಗೆ ಧುಮುಕಿದರು ಮತ್ತು ಕೊಳದ ಒಂದು ದಡದಿಂದ ಮತ್ತೊಂದು ದಡಕ್ಕೆ ಸುಲಭವಾಗಿ ಈಜಿದರು. ಶಾಸಕರು ಈಜುವುದನ್ನು ನೋಡಿದ ಜನ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಆನಂದಿಸಿದರು. ಯತ್ನಾಳ್ ಕಟ್ಟುಮಸ್ತಾದ ಆಳು. ಎತ್ತರಕ್ಕಿದ್ದಾರೆ ಮತ್ತು ಅದಕ್ಕೆ ತಕ್ಕನಾದ ದೇಹದಾರ್ಢ್ಯವನ್ನೂ ಹೊಂದಿದ್ದಾರೆ. ವಯಸ್ಸಾಗುತ್ತಿರುವುದರಿಂದ ಹೊಟ್ಟೆಯ ಸುತ್ತಳತೆ ಜಾಸ್ತಿಯಾಗಿದೆ. ಆದರೆ, ಕಾಲೇಜು ದಿನಗಳಲ್ಲಿ ಅವರೊಬ್ಬ ಉತ್ತಮ ಕ್ರೀಡಾಪಟು ಆಗಿರಬಹುದು ಅನಿಸುತ್ತೆ ಮಾರಾಯ್ರೇ.
ಇದನ್ನೂ ಓದಿ: ಯತ್ನಾಳ್ ಮೊದಲು ತನ್ನ ಪಕ್ಷದಲ್ಲಿನ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ, ಆಮೇಲೆ ಬೇರೆಯವರ ಬಗ್ಗೆ ಮಾತಾಡಲಿ: ಡಿಕೆ ಶಿವಕುಮಾರ