ಈಡಿ ದಾಳಿಯಲ್ಲಿ ಯಾವ್ಯಾವ ನಾಯಕ ಮನೆಯಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದೆಯೋ ಅವರನ್ನು ಜೈಲಿಗೆ ಹಾಕಬೇಕು: ಯತ್ನಾಳ್
ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳನ್ನು ರಾತ್ರಿ 2 ಗಂಟೆಯವರೆಗೆ ವಿಚಾರಣೆ ನಡೆಸುವ ಸುಪ್ರೀಮ್ ಕೋರ್ಟ್ ರಾಮಮಂದಿರ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಗಳಿಗೆ ಸಂಬಂಧಿಸಿದ ಪ್ರಕರಣಗಳನ್ನೂ ಅದೇ ರೀತಿ ವಿಚಾರಣೆ ನಡೆಸಿದ್ದರೆ ಅವು ಯಾವತ್ತೋ ಇತ್ಯರ್ಥಗೊಂಡಿರುತ್ತಿದ್ದವು ಎಂದು ಯತ್ನಾಳ್ ಹೇಳಿದರು.
ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ತಮ್ಮ ಪಕ್ಷ, ವಿರೋಧ ಪಕ್ಷ ಅಂತ ಮುಲಾಜಿಲ್ಲದೆ ಮಾತಾಡುತ್ತಾರೆ. ಶುಕ್ರವಾರದ ವಿಜಯಪುರನಲ್ಲಿ ಟಿವಿ9 ಕನ್ನಡ ವರದಿಗಾರರೊಂದಿಗೆ ಮಾತಾಡಿದ ಯತ್ನಾಳ್ ಕಾಂಗ್ರೆಸ್ ಪಕ್ಷ (Congress party) ಒಬ್ಬ ನಾಯಕನ ಹಾಗೆ ತಮ್ಮ ಪಕ್ಷದಲ್ಲೂ ಒಬ್ಬ ಸಿಡಿ (CD) ತಯಾರಿಸುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾನೆ ಅಂತ ಹೇಳಿದರಲ್ಲದೆ ಇಬ್ಬರು ಜೊತೆಗೂಡಿಯೇ ಸಿಡಿ ತಯಾರಿಸುತ್ತಾರೆ ಎಂದರು. ಈ ಕೆಲಸಕ್ಕಾಗಿಯೇ ಅವರು ತಮ್ಮೊಂದಿಗೆ ಒಂದು ಸಾಫ್ಟ್ ವೇರ್ ಕಂಪನಿಯನ್ನು ಇಟ್ಟುಕೊಂಡಿದ್ದಾರೆ ಎಂದು ಯತ್ನಾಳ್ ಅರೋಪಿಸಿದರು. ಇಂಥ ಜನ ರಾಜಕಾರಣದಲ್ಲಿರಲು ಲಾಯಕ್ಕಲ್ಲ, ಹಾಗಾಗಿ ಯಾವ್ಯಾವ ನಾಯಕನ ಮನೆ ಮೇಲೆ ಈಡಿ ದಾಳಿ ನಡೆಸಿ ಸಾವಿರಾರು ಕೋಟಿ ರೂ. ಮೌಲ್ಯದ ಅಸ್ತಿ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆಯೋ ಆ ನಾಯಕರನ್ನು ಒದ್ದು ಜೈಲಿಗೆ ತಳ್ಳಬೇಕು, ಅವನು ಬಿಜೆಪಿ ಪಕ್ಷದವನಾಗಿರಲಿ ಇಲ್ಲ ಕಾಂಗ್ರೆಸ್ ಎಂದು ಯತ್ನಾಳ್ ಹೇಳಿದರು.
ಅನಾರೋಗ್ಯದ ಕಾರಣ ಹೇಳಿ, ಜಾಮೀನು ಪಡೆದು ಜೈಲಿಂದ ಹೊರಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಬ್ಯಾರಿಕೇಡ್ ಗಳನ್ನು ಹತ್ತಿ ಜಿಗಿಯುವುದನ್ನು ಕೋರ್ಟುಗಳು ನೋಡಬೇಕು. ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳನ್ನು ರಾತ್ರಿ 2 ಗಂಟೆಯವರೆಗೆ ವಿಚಾರಣೆ ನಡೆಸುವ ಸುಪ್ರೀಮ್ ಕೋರ್ಟ್ ರಾಮಮಂದಿರ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಗಳಿಗೆ ಸಂಬಂಧಿಸಿದ ಪ್ರಕರಣಗಳನ್ನೂ ಅದೇ ರೀತಿ ವಿಚಾರಣೆ ನಡೆಸಿದ್ದರೆ ಅವು ಯಾವತ್ತೋ ಇತ್ಯರ್ಥಗೊಂಡಿರುತ್ತಿದ್ದವು ಎಂದು ಯತ್ನಾಳ್ ಹೇಳಿದರು.
ಹಾಗಾಗಿ ಗೂಂಡಾ ಸ್ವಭಾವದ ನಾಯಕರ ವಿರುದ್ಧ ನ್ಯಾಯಾಲಯಗಳು ಕಠಿಣ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕದಲ್ಲಿ ಗೂಂಡಾರಾಜ್ ಬರುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಇದನ್ನೂ ಓದಿ: Hardik Pandya: ಹಾರ್ದಿಕ್ ಪಾಂಡ್ಯ ಬುಲೆಟ್ ಥ್ರೋಗೆ ಪೀಸ್ ಪೀಸ್ ಆದ ವಿಕೆಟ್: ರೋಚಕ ವಿಡಿಯೋ ನೋಡಿ