Hardik Pandya: ಹಾರ್ದಿಕ್ ಪಾಂಡ್ಯ ಬುಲೆಟ್ ಥ್ರೋಗೆ ಪೀಸ್ ಪೀಸ್ ಆದ ವಿಕೆಟ್: ರೋಚಕ ವಿಡಿಯೋ ನೋಡಿ
Hardik Pandya Run Out Sanju Samson: ಈ ಘಟನೆ ನಡೆದಿದ್ದು ರಾಜಸ್ಥಾನ್ ರಾಯಲ್ಸ್ ತಂಡ ಟಾರ್ಗೆಟ್ ಬೆನ್ನಟ್ಟುವ ವೇಳೆ. ಎಂಟನೇ ಓವರ್ನ ಲೂಕಿ ಫರ್ಗುಸನ್ ಬೌಲಿಂಗ್ನ ಮೂರನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಮಿಡ್ ಆಫ್ನಲ್ಲಿ ಬ್ಯಾಟ್ ಬೀಸಿ ಕ್ವಿಕ್ ಸಿಂಗಲ್ಗೆಂದು ಓಡಿದರು. ಇದನ್ನ ಗಮನಿಸಿದ ಹಾರ್ದಿಕ್ ಓಡಿ ಬಂದು ಚೆಂಡನ್ನು ಹಿಡಿದು ವಿಕೆಟ್ಗೆ ಎಸೆದರು.
ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ರಲ್ಲಿ ಹೊಸ ತಂಡವಾದ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಗುಜರಾತ್ ಟೈಟಾನ್ಸ್ ಟೀಮ್ ಭರ್ಜರಿ ಪ್ರದರ್ಶನ ತೋರುತ್ತಿದೆ. ಆಡಿರುವ ಐದು ಪಂದ್ಯಗಳ ಪೈಕಿ ಒಂದರಲ್ಲಷ್ಟೆ ಸೋಲು ನಾಲ್ಕರಲ್ಲಿ ಗೆದ್ದು ಬೀಗಿದೆ. ಜಿಟಿ ತಂಡ ಐಪಿಎಲ್ 2022 ಪಾಯಿಂಟ್ ಟೇಬಲ್ನಲ್ಲಿ +0.450 ರನ್ರೇಟ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಗುಜರಾತ್ (Gujarat Titans) ತಂಡದ ಈ ಅದ್ಭುತ ಪ್ರದರ್ಶನಕ್ಕೆ ನಾಯಕ ಹಾರ್ದಿಕ್ ಕೂಡ ಪ್ರಮುಖ ಕಾರಣ. ಕಳೆದ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಂಪೂರ್ಣ ವಿಫಲರಾದ ಹಾರ್ದಿಕ್ ಈ ಬಾರಿ ನಾಯಕನಾಗಿ ಬೊಂಬಾಟ್ ಪ್ರದರ್ಶನ ತೋರುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ ಬೌಲಿಂಗ್, ಫೀಲ್ಡಿಂಗ್ನಲ್ಲೂ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಇದಕ್ಕೆ ಐಪಿಎಲ್ನಲ್ಲಿ ಗುರುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವೇ ಸಾಕ್ಷಿ. ಇದರಲ್ಲಿ ಹಾರ್ದಿಕ್ ಮಾಡಿದ ಒಂದು ರನೌಟ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಾಯಿಸಿತು.
ಈ ಘಟನೆ ನಡೆದಿದ್ದು ರಾಜಸ್ಥಾನ್ ರಾಯಲ್ಸ್ ತಂಡ ಟಾರ್ಗೆಟ್ ಬೆನ್ನಟ್ಟುವ ವೇಳೆ. ಎಂಟನೇ ಓವರ್ನ ಲೂಕಿ ಫರ್ಗುಸನ್ ಬೌಲಿಂಗ್ನ ಮೂರನೇ ಎಸೆತದಲ್ಲಿ ಸಂಜು ಸ್ಯಾಮ್ಸನ್ ಮಿಡ್ ಆಫ್ನಲ್ಲಿ ಬ್ಯಾಟ್ ಬೀಸಿ ಕ್ವಿಕ್ ಸಿಂಗಲ್ಗೆಂದು ಓಡಿದರು. ಇದನ್ನ ಗಮನಿಸಿದ ಹಾರ್ದಿಕ್ ಓಡಿ ಬಂದು ಚೆಂಡನ್ನು ಹಿಡಿದು ವಿಕೆಟ್ಗೆ ಎಸೆದರು. ಸ್ಯಾಮ್ಸನ್ ಗೆರೆ ಮುಟ್ಟುವ ಮೊದಲು ಚೆಂಡು ವಿಕೆಟ್ಗೆ ತಾಗಿತ್ತು. ಹಾರ್ದಿಕ್ ಎಸೆದ ರಭಸಕ್ಕೆ ಚೆಂಡು ಕೇವಲ ವಿಕೆಟ್ಗೆ ತಾಗಿದ್ದಲ್ಲದೆ ವಿಕೆಟ್ ತುಂಡು ತುಂಡಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Hardik Pandya breaks the stumps. #IPL20222 #GTvsRR pic.twitter.com/VNcU6uswuT
— Cricketupdates (@Cricupdates2022) April 14, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಉತ್ತಮ ಆರಂಭ ಪಡೆಯಲು ವಿಫಲಗೊಂಡಿತು. ಆರಂಭಿಕ ಬ್ಯಾಟರ್ ಮ್ಯಾಥ್ಯೂ ವೇಡ್ 12ರನ್‌ಗೆ ರನೌಟ್‌ಗೆ ಬಲಿಯಾದರೆ, ಶುಭ್ಮನ್ ಗಿಲ್ 13ರನ್‌ಗಳಿಸಿದರು. 53ರನ್‌ಗೆ ಮೂರು ವಿಕೆಟ್ ಕಳೆದುಕೊಂಡ ಗುಜರಾತ್ಗೆ ಮತ್ತೊಮ್ಮೆ ನಾಯಕ ಹಾರ್ದಿಕ್ ಪಾಂಡ್ಯ ಆಧಾರವಾದರು. ಅಬ್ಬರದ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 52 ಎಸೆತಗಳಲ್ಲಿ ಅಜೇಯ 87 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಪಾಂಡ್ಯ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 4 ಸ್ಫೋಟಕ ಸಿಕ್ಸರ್‌ಗಳಿದ್ದವು. ಅಭಿನವ್ ಮನೋಹರ್ 28 ಎಸೆತಗಳಲ್ಲಿ 43 ರನ್ ಕಲೆಹಾಕಿದರು. ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.
ಸವಾಲಿನ ಮೊತ್ತ ಬೆನ್ನತ್ತಿದ ರಾಜಸ್ಥಾನ್‌ಗೆ ಜೋಸ್ ಬಟ್ಲರ್ ಬಿರುಸಿನ ಆರಂಭವೊದಗಿಸಿದರು. ಆದರೆ ವಿಕೆಟ್‌ನ ಮತ್ತೊಂದು ತುದಿಯಿಂದ ಉತ್ತಮ ಬೆಂಬಲ ಸಿಗಲಿಲ್ಲ. ದೇವದತ್ ಪಡಿಕ್ಕಲ್ (0) ಹಾಗೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸಿಗಿಳಿದಿದ್ದ ಆರ್. ಅಶ್ವಿನ್ (8) ನಿರಾಸೆ ಮೂಡಿಸಿದರು. ಅತ್ತ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಔಟಾದರು. ಸ್ಯಾಮ್ಸನ್ (11), ರಸ್ಸಿ ವಾನ್ ಡರ್ ದುಸಾನ್ (6) ಪೆವಿಲಿಯನ್ ಸೇರುವುದರೊಂದಿಗೆ ರಾಜಸ್ಥಾನ್ 90 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ ಹಂತದಲ್ಲಿ ಶಿಮ್ರಾನ್ ಹೆಟ್ಮೆಯರ್ (29 ಪ್ರಯತ್ನಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಗುಜರಾತ್ ಪರ ಲಾಕಿ ಫರ್ಗ್ಯುಸನ್ ಹಾಗೂ ಚೊಚ್ಚಲ ಪಂದ್ಯ ಆಡಿದ ಯಶ್ ದಯಾಲ್ ತಲಾ ಮೂರು ವಿಕೆಟ್ ಕಬಳಿಸಿದರು.
Hardik Pandya: ಅಗ್ರಸ್ಥಾನಕ್ಕೇರಿದ ಖುಷಿಯಲ್ಲಿ ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು ಕೇಳಿ