ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ

Updated on: Nov 01, 2026 | 3:37 PM

ನವೆಂಬರ್ 1ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದು, ಯಶಸ್, ಧನುಷ್, ಆಸಿಯಾ ಮುಂತಾದವರು ತಮ್ಮ ಸಹ-ಸ್ಪರ್ಧಿಗಳ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ. ಸುದೀಪ್ ಅವರ ಎದುರಲ್ಲೇ ಸ್ಪರ್ಧಿಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಗಮನ ಸೆಳೆದಿರುವ ಬಿಗ್ ಬಾಸ್ ಪ್ರೋಮೋ ಇಲ್ಲಿದೆ ನೋಡಿ..

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಸಾಕಷ್ಟು ಬೆಳವಣಿಗೆ ನಡೆದಿವೆ. ಅವುಗಳ ಬಗ್ಗೆ ಕಿಚ್ಚ ಸುದೀಪ್ ಅವರು ವಾರಾಂತ್ಯದ ಸಂಚಿಕೆಯಲ್ಲಿ ಚರ್ಚೆ ಮಾಡಿದ್ದಾರೆ. ಸುದೀಪ್ ಅವರ ಎದುರಲ್ಲೇ ಸ್ಪರ್ಧಿಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದಿನಗಳು ಕಳೆದಂತೆಲ್ಲ ಆಟದ ತೀವ್ರತೆ ಹೆಚ್ಚುತ್ತದೆ. ಸದಸ್ಯರ ಸಂಖ್ಯೆ ಕಡಿಮೆ ಆದಂತೆಲ್ಲ ಪೈಪೋಟಿ ಜಾಸ್ತಿ ಆಗುತ್ತದೆ. ಈಗಾಗಲೇ ಶೇಕಡ 50ರಷ್ಟು ಆಟ ಮುಗಿದಿದೆ. ಇನ್ನುಳಿದ ದಿನಗಳಲ್ಲಿ ಯಾರ ಆಟ ಕೊನೆಯಾಗಲಿದೆ ಮತ್ತು ಯಾರ ಆಟ ಮುಂದುವರಿಯಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ. ನವೆಂಬರ್ 1ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದು, ಯಶಸ್, ಧನುಷ್, ಆಸಿಯಾ ಮುಂತಾದವರು ತಮ್ಮ ಸಹ-ಸ್ಪರ್ಧಿಗಳ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More