ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ಕೊಟ್ಟಾಗ ಹೊಸದಾಗಿ ಹಾಕಿದ ಡಾಂಬರು ರಸ್ತೆ ಕಿತ್ತು ಇಡೀ ದೇಶದಲ್ಲಿ ದೊಡ್ಡ ಸುದ್ದಿ ಆಯಿತು. ಈ ಕುರಿತು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶ ಮಾಡಿದ್ದಾರೆ. ಗುತ್ತಿಗೆದಾರರನ್ನು ಬಚಾವ್ ಮಾಡಿ, ತನಗಾದ ಮುಖಭಂಗ ತಪ್ಪಿಸಿಕೊಳ್ಳಲು ಬಿಬಿಎಂಪಿ ಒಂದು ಕಣ್ಕಟ್ಟು ವರದಿಯನ್ನು ಸಿದ್ದಪಡಿಸುತ್ತಿದೆ.
ಕಳಪೆ ರಸ್ತೆ ಬಗ್ಗೆ ಪ್ರಧಾನಿ ಕಚೇರಿಗೆ ತಪ್ಪು ಮಾಹಿತಿ ಕೊಟ್ಟ ಬಿಬಿಎಂಪಿ: ಗುತ್ತಿಗೆದಾರನ ರಕ್ಷಣೆಗೆ ಯತ್ನಿಸುತ್ತಿರುವ ಆರೋಪ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿ ವೇಳೆ ಕಳಪೆ ರಸ್ತೆ ನಿರ್ಮಿಸಿದ್ದ ಗುತ್ತಿಗೆದಾರರನ್ನು ರಕ್ಷಿಸಿಕೊಳ್ಳಲು ಬಿಬಿಎಂಪಿ ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕಳಪೆ ರಸ್ತೆ ಕುರಿತಂತೆ ಪ್ರಧಾನಿ ಕಾರ್ಯಾಲಯಕ್ಕೆ ತಪ್ಪು ಮಾಹಿತಿ ನೀಡಲು ಬಿಬಿಎಂಪಿ ಮುಂದಾಗಿದ್ದು, ಗುತ್ತಿಗೆದಾರನಿಗೆ ದಂಡ ಹಾಕುವ ಪ್ರಸ್ತಾವ ಕೈಬಿಟ್ಟಿದೆ ಎಂದು ಮೂಲಗಳು ಹೇಳಿವೆ.
ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳಲು ಬಿಡಬ್ಲ್ಯೂಎಸ್ಎಸ್ಬಿಯ ಪೈಪ್ಗಳು ಸೋರಿಕೆಯಾಗಿದ್ದು ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮರಿಯಪ್ಪನಪಾಳ್ಯದಲ್ಲಿ ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ದಂಡ ಹಾಕದಿರಲು ಸೂಚನೆ ನೀಡಲಾಗಿದೆ. ಗುತ್ತಿಗೆದಾರನಿಗೆ ದಂಡ ಹಾಕಿದರೆ ಕಳಪೆ ಕಾಮಗಾರಿ ಎಂದು ಒಪ್ಪಿಕೊಂಡಂತೆ ಆಗುತ್ತದೆ. ಹೀಗಾಗಿ ದಂಡ ಹಾಕಬೇಡಿ ಎಂದು ಸ್ಥಳೀಯ ಅಧಿಕಾರಿಗಳು ಉನ್ನತ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ರಸ್ತೆ ಕಾಮಗಾರಿಯು ಉತ್ತಮ ಗುಣಮಟ್ಟದ್ದು ಎಂದೇ ಹೇಳಲಾಗಿದೆ.
ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಆನಂದ್ ಬುರಲಿ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live
Also Read:
Also Read: