ಶಿವಮೊಗ್ಗ: ಮತಕ್ಕಾಗಿ ಕಾಂಗ್ರೆಸ್ (Congress) ಏನು ಬೇಕಾದರೂ ಮಾಡಿಕೊಂಡು ಬಂದಿದೆ ಎಂದು ಜಿಲ್ಲೆಯಲ್ಲಿ ಮಾತನಾಡಿದ ಶಿಕ್ಷಣ ಇಲಾಖೆ ಸಚಿವ ಬಿಸಿ ನಾಗೇಶ್ (BC Nagesh), ರಾಜ್ಯದಲ್ಲಿ ಟಿಪ್ಪು ಜಯಂತಿ ಕಾಂಗ್ರೆಸ್ನವರೇ ಆರಂಭಿಸಿದ್ದಾರೆ. ಕುವೆಂಪು ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಕುವೆಂಪು ಬರೆದ ನಾಡಗೀತೆಯನ್ನು 2017ರಲ್ಲೇ ತಿರುಚಿದ್ದಾರೆ. ತಿರುಚಿದವರ ಮೇಲೆ ಒಂದೇ ಒಂದು ಕೇಸ್ ಬುಕ್ ಮಾಡಿಲ್ಲ. ಆದರೆ ನಾಡಗೀತೆ ತಿರುಚಿದವರ ವಿರುದ್ಧ ಕ್ರಮಕ್ಕೆ ಬಿಜೆಪಿ ಮುಂದಾಗಿದೆ. ‘ರಾಮಾಯಣ ದರ್ಶನಂ’ ಪಾಠ ತೆಗೆದಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಮೈಸೂರು ಮಹಾರಾಜರ ಪೂರ್ಣ ಪಾಠವನ್ನು ತೆಗೆದು ಹಾಕಿದೆ. ನಾಡಪ್ರಭು ಕೆಂಪೇಗೌಡರ ಪಾಠ ಕೈಬಿಟ್ಟಿತ್ತು ಎಂದು ಹೇಳಿಕೆ ನೀಡಿರುವ ಬಿಸಿ ನಾಗೇಶ್, ಡಿಕೆಶಿ, ಸಿದ್ದರಾಮಯ್ಯರಿಂದ ರಾಷ್ಟ್ರೀಯತೆ ಪಾಠ ಕಲಿಯಬೇಕಿಲ್ಲ. ಸಿದ್ದರಾಮಯ್ಯ ಸರ್ಕಾರ ಕುವೆಂಪು ಅವರಿಗೆ ಅವಮಾನ ಮಾಡಿದೆ. ಬಿಜೆಪಿ ಪ್ರಶ್ನಿಸುವ ಮೊದಲು ನೈತಿಕ ಹೊಣೆ ಹೊತ್ತು ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪೊಲೀಸ್ ವಾಹನವೇರಿ ಕುಡುಕನ ಜಾಲಿ ರೈಡ್: ಇಲ್ಲಿದೆ ವೈರಲ್ ವಿಡಿಯೋ
ಯಾವುದೇ ಮಹನೀಯರ ಪಠ್ಯ ಕೈಬಿಟ್ಟಿಲ್ಲ. ಬಸಣ್ಣರಿಗೆ ಅವಮಾನ ಮಾಡಿದ್ದು ಸಿದ್ದರಾಮಯ್ಯ, ನಾವಲ್ಲ. ಇವರಿಗೆ ಏನು ಸಿಗದೇ ಇದ್ದಾಗ ಕೇಸರಿ ಚಡ್ಡಿ ಬಗ್ಗೆ ಮಾತಾಡ್ತಾರೆ. ವೈಚಾರಿಕ ಆಂದೋಲನ ಮಾಡಲು ಅವರ ಬಳಿ ಏನು ಇಲ್ಲ. ಬಿಜೆಪಿ ಸರ್ಕಾರದ ಅಭಿವೃದ್ಧಿ ಸಹಿಸದೇ ಈ ರೀತಿ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು.
ಕರ್ನಾಟಕ ಉತ್ತರ ಪ್ರದೇಶದಂತೆ ಆಗಿದೆ- ಬಿಕೆ ಹರಿಪ್ರಸಾದ್:
ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಿಂದ ಸಮಸ್ಯೆ ಉದ್ಭವಿಸಿದೆ. ಈ ಹಿನ್ನೆಲೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸುತಿದ್ದಾರೆ. ತೀರ್ಥಹಳ್ಳಿಯವರೇ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯದ ಇತಿಹಾಸದಲ್ಲೇ ಕಳಪೆ ಗೃಹ ಸಚಿವ. ಗೃಹ ಸಚಿವರಾದ ನಂತರ ಆರಗ ಜ್ಞಾನೇಂದ್ರ ಅವರ ಕುಖ್ಯಾತಿ ಹೆಚ್ಚುತ್ತಲೇ ಇದೆ. ಸಚಿವರಾದ ಬಳಿಕ ಒಂದೂ ಸರಿಯಾದ ಹೇಳಿಕೆ ನೀಡಿಲ್ಲ. ಆರಗ ಅವರಿಂದ ಕರ್ನಾಟಕ ಉತ್ತರ ಪ್ರದೇಶದಂತೆ ಆಗಿದೆ ಎಂದು ಶಿವಮೊಗ್ಗದಲ್ಲಿ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Wed, 15 June 22