ಮಂಗಳೂರು: ಪ್ರಯಾಣಿಕನಂತೆ ಬಸ್​ ಹತ್ತುವ ಕಳ್ಳ ಕಂಡಕ್ಟರ್​ ಕ್ಯಾಶ್ ಬ್ಯಾಗ್​ ನಿಂದ 4,500 ರೂ. ದೋಚಿಕೊಂಡು ಪರಾರಿಯಾಗುತ್ತಾನೆ!

ಮಂಗಳೂರು: ಪ್ರಯಾಣಿಕನಂತೆ ಬಸ್​ ಹತ್ತುವ ಕಳ್ಳ ಕಂಡಕ್ಟರ್​ ಕ್ಯಾಶ್ ಬ್ಯಾಗ್​ ನಿಂದ 4,500 ರೂ. ದೋಚಿಕೊಂಡು ಪರಾರಿಯಾಗುತ್ತಾನೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 15, 2022 | 12:26 PM

ಮೊದಲು ಪ್ರಯಾಣಿಕರು ಕೂರುವ ಸೀಟಿನ ಮೇಲಿನ ಬಾಕ್ಸ್​ ತಡಕಾಡುತ್ತಾನೆ. ಅಲ್ಲಿ ಏನೂ ಸಿಗೋದಿಲ್ಲ. ನಂತರ ಕ್ಯಾಬಿನ್​ ಗೆ ಬಂದು ಚಾಲಕನ ಸೀಟಿನ ಮೇಲಿರುವ ಬಾಕ್ಸ್​​ ಗೆ ಕೈ ಹಾಕಿದಾಗ ಅಲ್ಲಿ ಕಂಡಕ್ಟರ್​ ಇಟ್ಟಿದ್ದ ಕ್ಯಾಶ್ ಬ್ಯಾಗ್ ಸಿಗುತ್ತದೆ. ಅದರೊಳಗಿಂದ ರೂ. 4,500 ಹಣ ಎತ್ತಿಕೊಂಡು ಅಲ್ಲಿಂದ ಮೆತ್ತಗೆ ಜಾರಿಕೊಳ್ಳುತ್ತಾನೆ.

Mangaluru: ಈ ಚಾಲಾಕಿ ಕಳ್ಳನ (burglar) ಕರಾಮತ್ತು ನೋಡಿ ಮಾರಾಯ್ರೇ. ಇದು ಮಂಗಳೂರು (Mangaluru) ಮತ್ತು ಉಪ್ಪಿನಂಗಡಿ (Uppinangadi) ಮಧ್ಯೆ ಸಂಚರಿಸುವ ಖಾಸಗಿ ಬಸ್ಸೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕೆಮೆರಾನಲ್ಲಿ ಸೆರೆಯಾಗಿರುವ ದೃಶ್ಯ. ಅಮಾಯಕ ಪ್ರಯಾಣಿಕನಂತೆ ಬಸ್ ಹತ್ತುವ ಇವನು ಮೊದಲು ಪ್ರಯಾಣಿಕರು ಕೂರುವ ಸೀಟಿನ ಮೇಲಿನ ಬಾಕ್ಸ್​ ತಡಕಾಡುತ್ತಾನೆ. ಅಲ್ಲಿ ಏನೂ ಸಿಗೋದಿಲ್ಲ. ನಂತರ ಕ್ಯಾಬಿನ್​ ಗೆ ಬಂದು ಚಾಲಕನ ಸೀಟಿನ ಮೇಲಿರುವ ಬಾಕ್ಸ್​​ ಗೆ ಕೈ ಹಾಕಿದಾಗ ಅಲ್ಲಿ ಕಂಡಕ್ಟರ್​ ಇಟ್ಟಿದ್ದ ಕ್ಯಾಶ್ ಬ್ಯಾಗ್ ಸಿಗುತ್ತದೆ. ಅದರೊಳಗಿಂದ ರೂ. 4,500 ಹಣ ಎತ್ತಿಕೊಂಡು ಅಲ್ಲಿಂದ ಮೆತ್ತಗೆ ಜಾರಿಕೊಳ್ಳುತ್ತಾನೆ. ಬಸ್ಸಿನ ಚಾಲಕ ಮತ್ತು ಕಂಡಕ್ಟರ್​ ಊಟಕ್ಕೆ ಹೋದಾಗ ಕಳ್ಳ ತನ್ನ ಕೃತ್ಯ ನಡೆಸಿ ಪರಾರಿಯಾಗುತ್ತಾನೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.