ನನ್ನ ಜಾಗದಲ್ಲಿ ಸಿಟಿ ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ಬೂಟು ನೆಕ್ಕುತ್ತಿದ್ದರು: ಶ್ರೀನಿವಾಸ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ

ನನ್ನ ಜಾಗದಲ್ಲಿ ಸಿಟಿ ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ಬೂಟು ನೆಕ್ಕುತ್ತಿದ್ದರು: ಶ್ರೀನಿವಾಸ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 15, 2022 | 1:50 PM

ಯಡಿಯೂರಪ್ಪನವರೇ ರವಿಯನ್ನು ಮೂರ್ಖ ಅಂತ ಹೇಳಿದ್ದರು. ಇನ್ನು ನಮ್ಮನ್ನು ಶಿಖಂಡಿ ಅಂತ ಅವರು ಹೇಳುತ್ತಾರಲ್ವಾ, ನಾನು ಹೇಳ್ತೀನಿ ಈ ಆರೆಸ್ಸೆಸ್ ಗಿರಾಕಿಗಳೆಲ್ಲ ಶಿಖಂಡಿಗಳು ಅಂತ ಶ್ರೀನಿವಾಸ ಹೇಳಿದರು.

Delhi:  ಮಂಗಳವಾರ ದೆಹಲಿಯಲ್ಲಿ (Delhi) ಪೊಲೀಸರು ತಮ್ಮನ್ನು ಬಂಧಿಸಲು ಬಂದಾಗ ತೀವ್ರ ಸ್ವರೂಪದ ಪ್ರತಿರೋಧ ಒಡ್ಡಿದ ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ (Srinivas) ಅವರು ತಮ್ಮ ವಿರುದ್ಧ ಸಿಟಿ ರವಿ (CT Ravi) ಅವರು ಮಾಡಿರುವ ಉತ್ತರಗಳಿಗೆ ಮಾರುತ್ತರ ನೀಡಿದ್ದಾರೆ. ಹಿಂದೆ ವೀರ ಸಾವರ್ಕರ್ ಅವರು ಬ್ರಿಟಿಷರ ಅಂಗಲಾಚಿದ ಹಾಗೆ ಪೊಲೀಸರ ನನ್ನ ಜಾಗದಲ್ಲಿ ರವಿ ಇದ್ದಿದ್ದರೆ, ಪೊಲೀಸರಿಂದ ಅರೆಸ್ಟ್ ಆಗಿ ಅವರ ಬೂಟುಗಾಲು ನೆಕ್ಕುತ್ತಿದ್ದರು. ಅದರೆ ನಾವು ಸುಭಾಷಚಂದ್ರ ಭೋಸ್ ಮತ್ತು ಭಗತ್ಸಿಂಗ್ ಅವರ ಹಾಗೆ ಹೋರಾಟ ಮಾಡುವವರು. ಮಧ್ಯರಾತ್ರಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದಕ್ಕೆ ಅವಾರ್ಡ್ ಕೊಡೋದಾದರೆ ಸಿ ಟಿ ರವಿಗೆ ಆಸ್ಕರ್ ಸಿಗುತ್ತೆ. ಯಡಿಯೂರಪ್ಪನವರೇ ರವಿಯನ್ನು ಮೂರ್ಖ ಅಂತ ಹೇಳಿದ್ದರು. ಇನ್ನು ನಮ್ಮನ್ನು ಶಿಖಂಡಿ ಅಂತ ಅವರು ಹೇಳುತ್ತಾರಲ್ವಾ, ನಾನು ಹೇಳ್ತೀನಿ ಈ ಆರೆಸ್ಸೆಸ್ ಗಿರಾಕಿಗಳೆಲ್ಲ ಶಿಖಂಡಿಗಳು ಅಂತ ಶ್ರೀನಿವಾಸ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.