ಬೆಳಗಾವಿ ನಗರಪಾಲಿಕೆ ಸದಸ್ಯರಿಗಿಲ್ಲ ಅಧಿಕಾರದ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಭಾಗ್ಯ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 06, 2022 | 3:27 PM

ಪಾಲಿಕೆ ಕಚೇರಿಯಲ್ಲಿ ಕೇಕ್ ಕಟ್ ಮಾಡಿ ವಾರ್ಷಿಕೋತ್ಸವ ಆಚರಿಸಬೇಕೆಂದುಕೊಂಡಿದ್ದ ಸದಸ್ಯರಿಗೆ ಆಯುಕ್ತರು ಅವಕಾಶ ನೀಡುತ್ತಿಲ್ಲ ಎಂದು ಒಬ್ಬ ಸದಸ್ಯ ಹೇಳುತ್ತಿದ್ದಾರೆ. ಆಯುಕ್ತರು ಮತ್ತು ಪೊಲೀಸರೊಂದಿಗೆ ಪಾಲಿಕೆ ಸದಸ್ಯರು ವಾದಿಸುತ್ತಿರುವುದನ್ನು ನೀವು ನೋಡಬಹುದು.  

 ಬೆಳಗಾವಿ: ರಾಜ್ಯದಲ್ಲಿರುವ ಪೌರಸೇವೆ ಸಂಸ್ಥೆಗಳಿಗೆ (civic bodies) ತಮ್ಮವೇ ಆದ ಸಮಸ್ಯೆಗಳಿವೆ. ಆದರೆ, ಬೆಳಗಾವಿಯ (Belagavi) ಮಹಾನಗರ ಪಾಲಿಕೆಯ ಸದಸ್ಯರಿಗೆ ಭಿನ್ನವಾದ ಸಮಸ್ಯೆ ಮಾರಾಯ್ರೇ. ಪಾಲಿಕೆಗೆ ಚುನಾವಣೆ ನಡೆದು ಒಂದು ವರ್ಷ ಕಳೆದರೂ ಆಯ್ಕೆಯಾಗಿರುವ ಸದಸ್ಯರು ಇದುವರೆಗೆ ಪ್ರಮಾಣ ವಚನ ಸ್ವೀಕರಿಸಲಿಲ್ಲವಂತೆ. ತಾವು ಆಯ್ಕೆಯಾದ ನಂತರದ ಮೊದಲ ವಾರ್ಷಿಕೋತ್ಸವವನ್ನು (anniversary) ಪಾಲಿಕೆ ಕಚೇರಿಯಲ್ಲಿ ಕೇಕ್ ಕಟ್ ಮಾಡಿ ಆಚರಿಸಬೇಕೆಂದುಕೊಂಡಿದ್ದ ಸದಸ್ಯರಿಗೆ ಆಯುಕ್ತರು ಅವಕಾಶ ನೀಡುತ್ತಿಲ್ಲ ಎಂದು ಒಬ್ಬ ಸದಸ್ಯ ಹೇಳುತ್ತಿದ್ದಾರೆ. ಆಯುಕ್ತರು ಮತ್ತು ಪೊಲೀಸರೊಂದಿಗೆ ಪಾಲಿಕೆ ಸದಸ್ಯರು ವಾದಿಸುತ್ತಿರುವುದನ್ನು ನೀವು ನೋಡಬಹುದು.