ಚಾಮರಾಜನಗರ: ತನ್ನಮ್ಮನಿಂದ ತಪ್ಪಿಸಿಕೊಂಡ ಮರಿಯಾನೆಯೊಂದು ನೇರವಾಗಿ ಬಂದಿದ್ದು ಗ್ರಾಮವೊಂದರ ಶಾಲೆಗೆ!
ಜನರನ್ನು ನೋಡಿ ಆನೆಮರಿ ವಿಸ್ಮಯಗೊಂಡಿರುವುದು ನಿಜವಾದರೂ ಅಲ್ಲಿರುವ ಜನರೊಂದಿಗೆ ಬಹಳ ಸೌಮ್ಯ ಸ್ವಭಾವದಿಂದ ವರ್ತಿಸುತ್ತಿದೆ. ಅಂತಿಮವಾಗಿ ಗ್ರಾಮಸ್ಥರು ಅದನ್ನು ಕಾಡಿಗೆ ವಾಪಸ್ಸು ಕರೆದೊಯ್ದರು.
ಚಾಮರಾಜನಗರ: ಬಹಳ ಅಪ್ಯಾಯಮಾನವೆನಿಸುವ ಮನಸ್ಸಿಗೆ ಮುದನೀಡುವ ವಿಡಿಯೋ ಇದು. ಚಾಮರಾಜನಗರ (Chamarajanagar) ಜಿಲ್ಲೆಯ ಹಳ್ಳಿಯೊಂದರಿಂದ ನಮಗಿದು ಲಭ್ಯವಾಗಿದೆ. ಜಿಲ್ಲೆಯ ಬಹುತೇಕ ಭಾಗ ಕಾಡಿನಿಂದ ಆವೃತವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಕಾಡುಪ್ರದೇಶದಿಂದ (forest area) ಮರಿಯಾನೆಯೊಂದು (baby elephant) ತಾಯಿಂದ ಬೇರ್ಪಟ್ಟು ಊರೊಳಗೆ ಬಂದುಬಿಟ್ಟಿದೆ. ಅದು ಬಂದಿದ್ದಾದರೂ ಎಲ್ಲಿಗೆ ಗೊತ್ತಾ? ಆ ಊರಿನ ಶಾಲೆಗೆ! ಜನರನ್ನು ನೋಡಿ ಆನೆಮರಿ ವಿಸ್ಮಯಗೊಂಡಿರುವುದು ನಿಜವಾದರೂ ಅಲ್ಲಿರುವ ಜನರೊಂದಿಗೆ ಬಹಳ ಸೌಮ್ಯ ಸ್ವಭಾವದಿಂದ ವರ್ತಿಸುತ್ತಿದೆ. ಅಂತಿಮವಾಗಿ ಗ್ರಾಮಸ್ಥರು ಅದನ್ನು ಕಾಡಿಗೆ ವಾಪಸ್ಸು ಕರೆದೊಯ್ದರು.
Latest Videos