ಗೋಕಾಕ ಹತ್ತಿರದ ಗ್ರಾಮವೊಂದರ ಯುವಕರು ನಡೆಸಿದ ಕಾರ್ಯಾಚರಣೆ ಯಾವ ಸಾಹಸಕ್ಕೂ ಕಮ್ಮಿಯಿಲ್ಲದ್ದು!

ಗೋಕಾಕ ಹತ್ತಿರದ ಗ್ರಾಮವೊಂದರ ಯುವಕರು ನಡೆಸಿದ ಕಾರ್ಯಾಚರಣೆ ಯಾವ ಸಾಹಸಕ್ಕೂ ಕಮ್ಮಿಯಿಲ್ಲದ್ದು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 06, 2022 | 1:56 PM

ಒಂದು ಮನೆಯಲ್ಲಿ ಸಿಲುಕಿದ್ದ 12-ದಿನದ ಹಸುಗೂಸು ಮತ್ತು ಬಾಣಂತಿಯನ್ನು ಸುರಕ್ಷಿತವಾಗಿ ಹೊರತಂದ ನಂತರ ಅವರು ಮನೆಗಳ ಮಾಳಿಗೆ ಹತ್ತಿ ಕುಳಿತಿರುವ ಜನರನ್ನು ರಕ್ಷಿಸುತ್ತಾರೆ.

ಬೆಳಗಾವಿ: ಕೆಲವು ಯುವಕರು ಇಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಅಸಾಮಾನ್ಯವಾದದ್ದು ಮಾರಾಯ್ರೇ. ಸದರಿ ವಿಡಿಯೋ ನಮಗೆ ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಮಾಣಿಕ್ ವಾಡಿ (Manikwadi) ಗ್ರಾಮದಿಂದ ಲಭ್ಯವಾಗಿದೆ. ಇಲ್ಲಿರುವ 7-8 ಮನೆಗಳ ಮುಂದಿನಿಂದ ಮಳೆನೀರು ಪ್ರವಾಹದಂತೆ ಹರಿಯುತ್ತಿದೆ. ಒಂದು ಮನೆಯಲ್ಲಿ ಸಿಲುಕಿದ್ದ 12-ದಿನದ ಹಸುಗೂಸು (infant) ಮತ್ತು ಬಾಣಂತಿಯನ್ನು (lactating mother) ಸುರಕ್ಷಿತವಾಗಿ ಹೊರತಂದ ನಂತರ ಅವರು ಮನೆಗಳ ಮಾಳಿಗೆ ಹತ್ತಿ ಕುಳಿತಿರುವ ಜನರನ್ನು ರಕ್ಷಿಸುತ್ತಾರೆ. ಅದಾದ ಬಳಿಕ ಮನೆಯೊಳಗೆ ಸಿಲುಕಿರುವ ಒಂದು ಪುಟ್ಟ ಮಗುವನ್ನು ಮನೆಯ ಹೆಂಚುಗಳನ್ನು ಸರಿಸಿ ಕಾಪಾಡುತ್ತಾರೆ. ಅವರ ಸಾಹಸಕ್ಕೆ ನಮ್ಮದೊಂದು ಸಲಾಂ!

Published on: Sep 06, 2022 01:56 PM