ರಾಮಗೊಂಡನಹಳ್ಳಿ ಟಿ ಜೆಡ್ ವಿಲ್ಲಾ ನಿವಾಸಿಗಳು ಸುರಿಯುತ್ತಿರುವ ಮಳೆ ಕಾರಣ ಆತಂಕದಲ್ಲಿ ದಿನದೂಡುತ್ತಿದ್ದಾರೆ!
ಈ ಪ್ರದೇಶವೆಲ್ಲ ನಡುಗಡ್ಡೆಯಂತಾಗಿರುವುದರಿಂದ ನಿವಾಸಿಗಳು ಯಮಯಾತನೆ ಅನುಭವಿಸುತ್ತಿದ್ದಾರೆ ಮತ್ತು ಒಂದೇ ಸಮ ಸುರಿಯುತ್ತಿರುವ ಮಳೆ ನಿಲ್ಲುವ ಸೂಚನೆ ನೀಡದಿರುವುದರಿಂದ ಭೀತಿ ಹಾಗೂ ಆತಂಕದಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದಾರೆ.
ಬೆಂಗಳೂರು: ಅವೈಜ್ಞಾನಿಕ ಕಟ್ಟಡಗಳು, ರಾಜಾಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಿದ ಅಪಾರ್ಟ್ಮೆಂಟ್ ಗಳು, ಸ್ವಚ್ಛಗೊಳಿಸದ ಚರಂಡಿಗಳು, ಮಳೆನೀರು ಹರಿದ ಹೋಗಲು ಸೌಲಭ್ಯವಿಲ್ಲದ ರಸ್ತೆಗಳು-ಮೊದಲಾದವು ಬೆಂಗಳೂರು ನಾಗರಿಕರ ಬದುಕನ್ನು ದುಸ್ತರಗೊಳಿಸಿವೆ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವುದು ರಾಮಗೊಂಡನಹಳ್ಳಿ (Ramagondanahalli) ಟಿ ಜೆಡ್ ವಿಲ್ಲಾ. ಈ ಪ್ರದೇಶವೆಲ್ಲ ನಡುಗಡ್ಡೆಯಂತಾಗಿರುವುದರಿಂದ (island) ನಿವಾಸಿಗಳು ಯಮಯಾತನೆ ಅನುಭವಿಸುತ್ತಿದ್ದಾರೆ ಮತ್ತು ಒಂದೇ ಸಮ ಸುರಿಯುತ್ತಿರುವ ಮಳೆ ನಿಲ್ಲುವ ಸೂಚನೆ ನೀಡದಿರುವುದರಿಂದ ಭೀತಿ ಹಾಗೂ ಆತಂಕದಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (NDRF) ಸಿಬ್ಬಂದಿ ಬೋಟ್ ಗಳ ಜೊತೆಗೆ ನಿವಾಸಿಗಳ ನೆರವಿಗೆ ಧಾವಿಸಿದ್ದಾರೆ.
Latest Videos