ವಿಧಾನಸಭೆ ಕ್ಯಾಂಟೀನ್​ನಲ್ಲಿ ಸಚಿವರ ಕೈ ಚಳಕ: ತಾವೇ ಕಾಫಿ ತಯಾರಿಸಿ ಸವಿದ ಕೃಷ್ಣಭೈರೇಗೌಡ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2023 | 3:33 PM

Karnataka Assembly Winter Session 2023: ಇಂದಿನ ಮೊದಲ ದಿನದ ಅಧಿವೇಶನದ ಮಧ್ಯೆ ವಿಧಾನಸಭೆ ಕ್ಯಾಂಟೀನ್​ನಲ್ಲಿ ಸಚಿವರು ತಮ್ಮ ಕೈ ಚಳಕ ತೋರಿಸಿದ್ದಾರೆ. ಆಡಳಿತಪಕ್ಷದ ಮೊಗಸಾಲೆ ಕ್ಯಾಂಟೀನ್​ನಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ತಾವೇ ಕಾಫಿ ತಯಾರಿಸಿ ಸೇವಿಸಿದ್ದಾರೆ. ಇದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಿದೆ.

ಬೆಳಗಾವಿ, ಡಿಸೆಂಬರ್​ 04: ಇಂದಿನಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಿದೆ. ಬರಗಾಲ, ಮಹದಾಯಿ ಮತ್ತು ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲಾಗುತ್ತಿದೆ. ಇಂದಿನ ಮೊದಲ ದಿನದ ಅಧಿವೇಶನದ ಮಧ್ಯೆ ವಿಧಾನಸಭೆ ಕ್ಯಾಂಟೀನ್​ನಲ್ಲಿ ಸಚಿವರು ತಮ್ಮ ಕೈ ಚಳಕ ತೋರಿಸಿದ್ದಾರೆ. ಆಡಳಿತಪಕ್ಷದ ಮೊಗಸಾಲೆ ಕ್ಯಾಂಟೀನ್​ನಲ್ಲಿ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅವರು ತಾವೇ ಕಾಫಿ ತಯಾರಿಸಿ ಸೇವಿಸಿದ್ದಾರೆ. ಇನ್ನೂ ಮಂತ್ರಿಗಳು, ಶಾಸಕರು, ಅಧಿಕಾರಿ ವರ್ಗ, ಪೊಲೀಸ್ ಸಿಬ್ಬಂದಿ ಹೀಗೆ ಪ್ರತಿಯೊಬ್ಬರಿಗೂ ವಾಸ್ತವ್ಯದ ವ್ಯವಸ್ಥೆ ಜೊತೆಗೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 04, 2023 03:32 PM