ಕಳ್ಳತನದ ಪ್ರಕರಣಗಳನ್ನು ಭೇದಿಸಿ ₹ 1.67 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ ಬೆಳಗಾವಿ ಪೊಲೀಸ್
ಕಳ್ಳರಿಂದ ಜಪ್ತುಮಾಡಿದ ಚಿನ್ನಾಭರಣಗಳನ್ನು ಪೊಲೀಸರು ಅವುಗಳ ವಾರಸುದಾರರಿಗೆ ಮರಳಿಸಿದರು. ಇಬ್ಬರು ಗೃಹಿಣಿಯರು ಕಳುವಾಗಿದ್ದ ಚಿನ್ನಾಭರಣ ವಾಪಸ್ಸು ದೊರೆತ ಖುಷಿಯಲ್ಲಿ ಪೊಲೀಸರಿಗೆ ಧನ್ಯವಾದ ಸಲ್ಲಿಸಿದರು. ಇಬ್ಬರ ಮನೆಯಲ್ಲೂ ಇದೇ ವರ್ಷ ಫೆಬ್ರುವರಿ ತಿಂಗಳಲ್ಲಿ ಚಿನ್ನದ ಆಭರಣಗಳು ಮತ್ತು ನಗದು ಕಳುವಾಗಿದ್ದವಂತೆ.
ಬೆಳಗಾವಿ: ಬೆಳಗಾವಿ ವಿಭಾಗದ ಪೊಲೀಸರಿಂದ ಉತ್ತಮ ಕೆಲಸವಾಗಿದೆ. ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾರ್ಬನಿಯಾಂಗ್ ನೇತೃತ್ವದಲ್ಲಿ ಪೊಲೀಸರು 339 ಕಳ್ಳತನದ ಪ್ರಕರಣಗಳ ಪೈಕಿ 117 ಪ್ರಕರಣಗಳನ್ನು ಭೇದಿಸಿ ₹ 1.67 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ರಿಕವರ್ ಮಾಡಿದ್ದಾರೆ. ಮಾರ್ಟಿನ್ ಹೇಳುವ ಪ್ರಕಾರ ಶೇಕಡ 33 ರಷ್ಟು ಪ್ರಕರಣಗಳನ್ನು ಭೇದಿಸಲಾಗಿದೆ ಮತ್ತು ಉಳಿದ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಲಾಗುವುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಾವಿನ ಮನೆಯನ್ನೂ ಬಿಡದ ಖದೀಮರು; ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮನೆಯಲ್ಲಿ ಚಿನ್ನಾಭರಣ ಸೇರಿ ಲಕ್ಷಾಂತರ ರೂ. ಹಣ ಕಳುವು