ಗೋಕಾಕ್: ಭಾರಿ ಮಳೆಗೆ ತುಂಬಿ ಹರಿದ ಹಳ್ಳ ದಾಟಲು ಜೆಸಿಬಿ ಏರಿದ ಶಾಲೆ ಮಕ್ಕಳು
ಕರ್ನಾಟಕದಾದ್ಯಂತ ಅನೇಕ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಬೆಳಗಾವಿಯಲ್ಲಿಯೂ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಇದೀಗ ಗೋಕಾಕ್ ತಾಲೂಕಿನ ಗ್ರಾಮವೊಂದರಲ್ಲಿ ಹಳ್ಳ ಉಕ್ಕಿಹರಿದಿದ್ದು, ಶಾಲೆ ಮಕ್ಕಳು ಹಳ್ಳ ದಾಟಿ ಶಾಲೆಗೆ ತೆರಳಲು ಜೆಸಿಬಿಯನ್ನು ಆಶ್ರಯಿಸಬೇಕಾಗಿ ಬಂದಿದೆ.
ಬೆಳಗಾವಿ, ಅಕ್ಟೋಬರ್ 25: ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮ ಹಾಗೂ ಮಾಲದಿನ್ನಿ ಗ್ರಾಮದ ಮಧ್ಯೆ ಇರುವ ಹಳ್ಳ ತುಂಬಿ ಹರಿದಿದೆ. ಶಾಲೆ ಮಕ್ಕಳು ಜೀವ ಭಯದಲ್ಲಿ ಜೆಸಿಬಿ ಏರಿ ತುಂಬಿ ಹರಿದ ಹಳ್ಳ ದಾಟಿದರು. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಳ್ಳ ತುಂಬಿ ಹರಿದಿದೆ. ಸೇತುವೆ ಸರಿಪಡಿಸಲು ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕಿದ್ದಾರೆ. ಮಳೆ ಬಂದರೆ ಜೆಸಿಬಿಯಲ್ಲಿಯೇ ಮಕ್ಕಳನ್ನು ಹಳ್ಳ ದಾಟಿಸುವ ಸ್ಥಿತಿ ಇಲ್ಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos