ಕುಮಾರಸ್ವಾಮಿ ರೋಡ್ ಶೋ ಕಂಡು ವಿರೋಧ ಪಕ್ಷದ ನಾಯಕರು ಹೆದರಿದ್ದರೆ ಆಶ್ಚರ್ಯವಿಲ್ಲ!
ನಿನ್ನೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ರೋಡ್ ಶೋನಲ್ಲೂ ಜನವಿದ್ದರು ಆದರೆ ಈ ಪ್ರಮಾಣದಲ್ಲಿ ಅಲ್ಲ. ಇವತ್ತು ಜನರ ಕೈಯಲ್ಲಿ ಜೆಡಿಎಸ್ ಧ್ವಜಗಳು ರಾರಾಜಿಸುತ್ತಿದ್ದವು. ನಿಖಿಲ್ ಎನ್ಡಿಎ ಅಭ್ಯರ್ಥಿಯಾಗಿದ್ದರೂ ಬಿಜೆಪಿಯ ಧ್ವಜಗಳು ಹೆಚ್ಚು ಕಾಣಿಸಲಿಲ್ಲ. ಯೊಗೇಶ್ವರ್ಗೆ ಟಿಕೆಟ್ ಕೊಡದಿರುವುದಕ್ಕೆ ಅವರು ಮುನಿಸಿಕೊಂಡಿದ್ದಾರೆಯೇ?
ರಾಮನಗರ: ಈ ವಿಡಿಯೋ ನಿಸ್ಸಂದೇಹವಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಡಿಕೆ ಸುರೇಶ್ ಮತ್ತು ಸಿಪಿ ಯೋಗೇಶ್ವರ್ ಮೊದಲಾದವರನ್ನು ಕಳವಳಗೊಳ್ಳುವಂತೆ ಮಾಡುತ್ತದೆ. ಇವತ್ತು ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಎನ್ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ರೋಡ್ ಶೋನಲ್ಲಿ ಜನ ಸಾಗರದಂತೆ ಹರಿದು ಬಂದರು. ಎತ್ತ ನೋಡಿದರೂ ಜನ! ತೆರೆದ ವಾಹನದಲ್ಲಿ ಆರ್ ಅಶೋಕ್, ಯದುವೀರ್ ಕೃಷ್ಣದತ್ ಒಡೆಯರ್, ಡಾ ಸಿಎನ್ ಅಶ್ವಥ್ ನಾರಾಯಣ, ಡಾ ಕೆ ಸುಧಾಕರ್, ಡಿವಿ ಸದಾನಂದಗೌಡ ಮೊದಲಾದವರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:
Latest Videos