ಬೆಳಗಾವಿ ಅಧಿವೇಶನ: ನಾನೇ ವಿಪಕ್ಷ ನಾಯಕ ಎಂದ ಯತ್ನಾಳ್​​; ಸ್ಪೀಕರ್​​ಗೆ ಫುಲ್​​ ನಗು

Updated By: ಪ್ರಸನ್ನ ಹೆಗಡೆ

Updated on: Dec 09, 2025 | 1:13 PM

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, 'ನಾನೇ ನಿಜವಾದ ವಿರೋಧ ಪಕ್ಷದ ನಾಯಕ' ಎಂದು ಹೇಳಿದ್ದಾರೆ. ಬೇಕಾದಾಗ ನಾನು ಸದನಕ್ಕೆ ಬರಲ್ಲ. ಹೀಗಾಗಿ ಡೆಪ್ಯೂಟಿ ಸ್ಪೀಕರ್​​ ಪಕ್ಕ ನನಗೆ ಕುರ್ಚಿ ಹಾಕಿಸೋದಾದ್ರೆ ಹಾಕಿಸಿ ಎಂದು ಸ್ಪೀಕರ್​​ ಖಾದರ್​​ಗೆ ಹೇಳಿದ್ದಾರೆ. ಈ ವೇಳೆ ಯತ್ನಾಳ್​​ ಮಾತು ಕೇಳಿ ಯು.ಟಿ. ಖಾದರ್​​ಗೆ ನಗು ಬಂದಿದೆ.

ಬೆಳಗಾವಿ, ಡಿಸೆಂಬರ್​ 09: ಈ ಸದನದಲ್ಲಿ ನಿಜವಾಗಿ ವಿರೋಧ ಪಕ್ಷದ ನಾಯಕ ಎಂದರೆ ನಾನೇ. ನಾನು ಅಡ್ಜಸ್ಟ್​ಮೆಂಟ್ ಗಿರಾಕಿ ಅಲ್ಲ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಮುಖ್ಯಮಂತ್ರಿಗಳ ಕಚೇರಿಗೂ ಹೋಗಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ ವಿಧಾನ ಸಭೆಯಲ್ಲಿ ಹೇಳಿದ್ದಾರೆ. ಅಲ್ಲದೆ ಡೆಪ್ಯೂಟಿ ಸ್ಪೀಕರ್ ಪಕ್ಕದಲ್ಲಿ ತಮಗೆ ಒಂದು ಕುರ್ಚಿ ನಿಗದಿಪಡಿಸೋದಾದ್ರೆ ನಿಗದಿಪಡಿಸಿ ಎಂದು ಸ್ಪೀಕರ್​​ ಖಾದರ್​​ಗೆ ತಿಳಿಸಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ನೀತಿಗಳನ್ನು ಟೀಕಿಸಿದ ಯತ್ನಾಳ್, ಸರ್ಕಾರ ಒಂದು ಕಡೆ ಹೆಣ್ಣುಮಕ್ಕಳ ಪರ ನಾವಿದ್ದೇವೆ ಎಂದು ಹೇಳಿ ಗೃಹಲಕ್ಷ್ಮಿ ಯೋಜನೆಯಡಿ 2,000 ರೂಪಾಯಿ ನೀಡುತ್ತಿದೆ. ಆದರೆ, ಮತ್ತೊಂದೆಡೆ ಕಣ್ಣೀರು ಬರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು. ಗಂಡಂದಿರ ಕುಡಿತದ ಚಟದಿಂದ ಮಹಿಳೆಯರು ಹಾಗೂ ಅವರ ಕುಟುಂಬಗಳು ಹಾಳಾಗುತ್ತಿದೆ. ಈಗ ಮಕ್ಕಳಿಂದ ಹಿಡಿದು ಎಲ್ಲರೂ ಕುಡಿತಕ್ಕೆ ದಾಸರಾಗುತ್ತಿದ್ದು, ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳು ಮತ್ತು ಸಣ್ಣ ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಸಿಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಬಗ್ಗೆ ಅಬಕಾರಿ ಸಚಿವರಿಗೆ ಏನಾದರೂ ಚಿಂತನೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.