Belagavi Assembly Session Live: ಬೆಳಗಾವಿ ಅಧಿವೇಶನ ನೇರ ಪ್ರಸಾರ ಇಲ್ಲಿ ನೋಡಿ

Edited By:

Updated on: Dec 12, 2024 | 12:07 PM

Belagavi Winter Sesssion Live Streaming: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದ ಕಲಾಪ ನಡೆಯುತ್ತಿದೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕಿಚ್ಚಿನ ಮಧ್ಯೆ ಅಧಿವೇಶನ ನಡೆಯುತ್ತಿದ್ದು, ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಚಳಿಗಾಲದ ಅಧಿವೇಶನದ ಕಲಾಪಗಳ ನೇರ ಪ್ರಸಾರ ವಿಡಿಯೋ ಇಲ್ಲಿದೆ.

ಬೆಳಗಾವಿ, ಡಿಸೆಂಬರ್ 12: ಕರ್ನಾಟಕ ವಿಧಾನಮಂಡಲದ ನಾಲ್ಕನೇ ದಿನದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧಲ್ಲಿ ಗುರುವಾರ ಬೆಳಗ್ಗೆ ಆರಂಭವಾಗಿದೆ. ಏತನ್ಮಧ್ಯೆ, ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವವರ ಮೇಲೆ ಲಾಠಿಚಾರ್ಜ್ ನಡೆಸಿದ​ ಪ್ರಕರಣವೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ, ಬಸವ ಜಯಮೃತ್ಯುಂಜಯ ಶ್ರೀ ಕರೆಯಂತೆ ಲಿಂಗಾಯತರು ರಾಜ್ಯದಾದ್ಯಂತ ತಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಕಲಾಪದಲ್ಲಿಯೂ ಈ ವಿಚಾರ ಪ್ರತಿಧ್ವನಿಸುತ್ತಿದೆ. ವಿಧಾನಸಭೆ ಕಲಾಪದ ನೇರ ಪ್ರಸಾರದ ವಿಡಿಯೋ ಇಲ್ಲಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Dec 12, 2024 11:50 AM