Belagavi Session Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ

|

Updated on: Dec 13, 2024 | 10:41 AM

ಈ ವರ್ಷದ ಬೆಳಗಾವಿ ಅಧಿವೇಶನ ಆರಂಭದಲ್ಲೇ ಬಿರುಸಿನ ಚರ್ಚೆಗಳಿಗೆ ಕಾರಣವಾಗಿದೆ. ಲಿಂಗಾಯತ ಮೀಸಲಾತಿ ಹೋರಾಟದ ಕಾವು ತೀವ್ರಗೊಂಡಿದ್ದು, ಸದನದ ಒಳಗೂ ಹೊರಗೂ ಸದ್ದು ಮಾಡಿದೆ. ಏತನ್ಮಧ್ಯೆ ವಿವಿಧ ವರದಿಗಳನ್ನೂ ಗುರುವಾರ ಮಂಡಿಸಲಾಗಿತ್ತು. ಇದೀಗ ಐದನೇ ದಿನದ ಕಲಾಪ ಪ್ರಗತಿಯಲ್ಲಿದ್ದು, ಕಲಾಪದ ಲೈವ್ ವಿಡಿಯೋ ಇಲ್ಲಿದೆ.

ಬೆಳಗಾವಿ, ಡಿಸೆಂಬರ್ 13: ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿದೆ. ಅಧಿವೇಶನದ ನಾಲ್ಕನೇ ದಿನ ಬಹುತೇಕ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಂಬಂಧವೇ ಚರ್ಚೆ ನಡೆದಿತ್ತು. ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರೆ ಆಡಳಿತಾರೂಢ ಕಾಂಗ್ರೆಸ್ ಸಮರ್ಥಿಸಿಕೊಂಡಿತು. ಇದೀಗ ಐದನೇ ದಿನದ ಕಲಾಪ ನಡೆಯುತ್ತಿದೆ. ಕಲಾಪದ ನೇರ ಪ್ರಸಾರ ಇಲ್ಲಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ