Mysore Dasara: ಆನೆ ಲದ್ದಿ ತುಳಿದರೆ ಒಳಿತಾಗುತ್ತದೆ ಎಂಬ ನಂಬಿಕೆ; ಅದನ್ನು ತುಳಿದು ಸಂಭ್ರಮಿಸಿದ ಮೈಸೂರು ನಿವಾಸಿಗಳು

|

Updated on: Oct 24, 2023 | 10:24 AM

ಟನ್ ಗಟ್ಟಲೆ ತಿನ್ನುವ ಅನೆಗಳು ಅದನ್ನು ವಿಸರ್ಜಿಸುವುದು ಟನ್ ಗಳಲ್ಲೇ! ಇಂದು ಬೆಳಗ್ಗೆ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದಾಡಿದ ಅನೆಗಳ ಪೈಕಿ ಒಂದು ಲದ್ದಿ ಹಾಕಿದೆ. ಆ ಭಾಗದ ಜನ ಅದನ್ನು ತುಳಿಯುತ್ತಿರುವುದನ್ನು ನೋಡಬಹುದು. ಚಿಕ್ಕ ಚಿಕ್ಕ ಮಕ್ಕಳಿಗೂ ಪೋಷಕರು ಬಲವಂತದಿಂದ ಲದ್ದಿ ತುಳಿಸುತ್ತಿದ್ದಾರೆ.

ಮೈಸೂರು: ನಾವು ಭಾರತೀಯರಿಗೆ ಇರುವ ನಂಬಿಕೆಗಳೇ ಹಾಗೆ. ಕೆಲ ನಂಬಿಕೆಗಳು (beliefs) ವಿಚಿತ್ರ ಮತ್ತು ಅತಾರ್ಕಿಕ ಅಂತ ಬೇರೆಯವರಿಗೆ ಅನಿಸಿದರೂ ಅವುಗಳನ್ನು ಅನೂಚಾನಾಗಿ ಪಾಲಿಸಿಕೊಂಡು ಹೋಗುತ್ತೇವೆ. ಆನೆಗಳು ಹಾಕುವ ಲದ್ದಿಯ (elephant dung) ಬಗ್ಗೆ ನಮ್ಮಲ್ಲೊಂದು ನಂಬಿಕೆ ಇದೆ-ಅದನ್ನು ತುಳಿದರೆ ಬದುಕಿನಲ್ಲಿ ಒಳಿತಾಗುತ್ತದೆ. ಮೈಸೂರಿನವರಿಗಾದರೆ ದಸರಾ ಉತ್ಸವದ (Dasara Utsav) ಸಮಯದಲ್ಲಿ ಆನೆಗಳು ರಸ್ತೆಯ ಮೇಲೆ ಸಿಗುವ ಸಾಧ್ಯತೆ ಇದೆ. ಆದರೆ ನಾಡಿನ ಬೇರೆ ಭಾಗಗಳಲ್ಲಿ ವಾಸವಾಗಿರೋ ಜನಗಳು ಅದನ್ನು ಅರಸಿಕೊಂಡು ಅಡವಿಗೆ ಹೋಗಬೇಕಷ್ಟೇ! ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಬರುವ ಆನೆಗಳಿಗೆ ಬೆಳಗಿನ ಸಮಯದಲ್ಲಿ ವಾಕ್ ಮಾಡಿಸುವುದುಂಟು. ಆಗ ಅವು ಲದ್ದಿ ಹಾಕುವ ಸಾಧ್ಯತೆ ಇಲ್ಲದಿಲ್ಲ. ಟನ್ ಗಟ್ಟಲೆ ತಿನ್ನುವ ಅನೆಗಳು ಅದನ್ನು ವಿಸರ್ಜಿಸುವುದು ಟನ್ ಗಳಲ್ಲೇ! ಇಂದು ಬೆಳಗ್ಗೆ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ನಡೆದಾಡಿದ ಅನೆಗಳ ಪೈಕಿ ಒಂದು ಲದ್ದಿ ಹಾಕಿದೆ. ಆ ಭಾಗದ ಜನ ಅದನ್ನು ತುಳಿಯುತ್ತಿರುವುದನ್ನು ನೋಡಬಹುದು. ಚಿಕ್ಕ ಚಿಕ್ಕ ಮಕ್ಕಳಿಗೂ ಪೋಷಕರು ಬಲವಂತದಿಂದ ಲದ್ದಿ ತುಳಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ