ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಯಶಸ್ವೀ ಲ್ಯಾಂಡಿಂಗ್, ಬೆಂಗಳೂರಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಉತ್ಸಾಹದಿಂದ ಬೀಗುತ್ತಿರುವ ಜನ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಗರದ ಹಲವಾರು ಭಾಗಗಳಲ್ಲಿ ಜನ ರಸ್ತೆಗಳಿಗೆ ಬಂದು ಕುಣಿಯುತ್ತಿದ್ದಾರೆ ಮತ್ತು ಸಿಹಿ ಹಂಚುತ್ತಿದ್ದಾರೆ. ಟೀಂ ಇಂಡಿಯಾ ಐಸಿಸಿ ವಿಶ್ವಕಪ್ ಗೆದ್ದಾಗ ದೇಶದಲ್ಲಿ ಉಟಾಗುವ ಸನ್ನಿವೇಶ ಇವತ್ತು ಇಸ್ರೋ ವಿಜ್ಞಾನಿಗಳ ಯಶಸ್ಸಿನ ಹಿನ್ನೆಲೆಯಲ್ಲಿ ಕಂಡುಬರುತ್ತಿದೆ.
ಬೆಂಗಳೂರು: ಚಂದ್ರಯಾನ-3 ವಿಕ್ರಮ ಲ್ಯಾಂಡರ್ (Chandrayaan-3 Vikram Lander) ಚಂದ್ರನ ಮೇಲೆ ಸೇಫ್ ಆಗಿ ಲ್ಯಾಂಡ್ ಆಗಿರುವುದು ದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ ಮಾರಾಯ್ರೇ. ಎಲ್ಲೆಡೆ ಸಂಭ್ರಮಮ ಸಡಗರ, ಉತ್ಸವ ಮತ್ತು ಆಚರಣೆ. ಸಂಭ್ರಮಾಚರಣೆಯಲ್ಲಿ (celebration) ನಮ್ಮ ಬೆಂಗಳೂರು ಹಿಂದೆ ಬಿದ್ದಿಲ್ಲ. ಉತ್ಸಾಹದಿಂದ ಬೀಗುತ್ತಿರುವ ಜನ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಗರದ ಹಲವಾರು ಭಾಗಗಳಲ್ಲಿ ಜನ ರಸ್ತೆಗಳಿಗೆ ಬಂದು ಕುಣಿಯುತ್ತಿದ್ದಾರೆ ಮತ್ತು ಸಿಹಿ (distributing sweets) ಹಂಚುತ್ತಿದ್ದಾರೆ. ಟೀಂ ಇಂಡಿಯಾ ಐಸಿಸಿ ವಿಶ್ವಕಪ್ ಗೆದ್ದಾಗ ದೇಶದಲ್ಲಿ ಉಟಾಗುವ ಸನ್ನಿವೇಶ ಇವತ್ತು ಇಸ್ರೋ ವಿಜ್ಞಾನಿಗಳ ಯಶಸ್ಸಿನ ಹಿನ್ನೆಲೆಯಲ್ಲಿ ಕಂಡುಬರುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಿಶನ್ ಚಂದ್ರಯಾನ-3 ವಿಕ್ರಮ ಲ್ಯಾಂಡರ್ 40 ದಿನಗಳ ಕಾಲ ಚಂದ್ರನ ಕಕ್ಷೆಯೆಡೆ ಹಾರಿ ಬುಧವಾರ ಭಾರತೀಯ ಕಾಲಮಾನ 6.04 ಕ್ಕೆ ಚಂದ್ರನ ಮೇಲೆ ಯಶ್ವಸ್ವೀಯಾಗಿ ಲ್ಯಾಂಡ್ ಆದಾಗ ಇಡೀ ದೇಶ ಹುಚ್ಚೆದ್ದು ಕುಣಿಯತೊಡಗಿತು.
ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ