ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯ ಪುತ್ರನ ಹತ್ಯೆ ಪ್ರಕರಣ: ಸ್ಫೋಟಕ ಹೇಳಿಕೆ ನೀಡಿದ ಆರೋಪಿ ಸುದೀಪ್

Edited By:

Updated on: Nov 21, 2026 | 12:49 PM

ಬೆಂಗಳೂರಿನಲ್ಲಿ 18 ವರ್ಷದ ಸೋಹಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುದೀಪ್ ವಿಚಾರಣೆ ವೇಳೆ ಹತ್ಯೆಯ ಹಿಂದಿನ ಕಾರಣಗಳನ್ನು ಬಾಯಿಬಿಟ್ಟಿದ್ದಾನೆ. ಸೋಹಂ ತಾಯಿ ಸೀಮಾ ದಾಸ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಸುದೀಪ್, ಸಂಬಂಧ ಹದಗೆಟ್ಟಾಗ ಮತ್ತು ಸೀಮಾ ದೂರವಾದಾಗ ಕೋಪಗೊಂಡು ಸೋಹಂನೊಂದಿಗೆ ಜಗಳವಾಡಿ ಕೊಲೆ ಮಾಡಿದ್ದಾನೆ. ಸೀಮಾ ಮೇಲೂ ಹಲ್ಲೆ ನಡೆಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದನು.

ಬೆಂಗಳೂರು, ನ.21: ರಾಜಧಾನಿ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿವಿಂಗ್ ರಿಲೇಷನ್‌ಶಿಪ್ ವಿಚಾರವಾಗಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಆರೋಪಿ ಸುದೀಪ್ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನ್ನೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಸೀಮಾ ದಾಸ್ ಎಂಬ ಮಹಿಳೆಯ ಪುತ್ರ ಸೋಹಮ್ ದಾಸ್ನನ್ನು ಹತ್ಯೆಗೈದು, ಸೀಮಾ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಕೋಣೆಯಲ್ಲಿ ಕೂಡಿಹಾಕಿ ಪರಾರಿಯಾಗಿದ್ದ ಸುದೀಪ್, ಇದೀಗ ಪೊಲೀಸರ ವಿಚಾರಣೆ ವೇಳೆ ಕೊಲೆಯ ಹಿಂದಿನ ಅಸಲಿ ಕಾರಣಗಳನ್ನು ಬಾಯ್ಬಿಟ್ಟಿದ್ದಾನೆ. ಆರೋಪಿ ಸುದೀಪ್ ಕಳೆದ ಹಲವು ವರ್ಷಗಳಿಂದ ಸೀಮಾ ದಾಸ್ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ. ಸೀಮಾ ಜೊತೆಗಿನ ಸಂಬಂಧದ ವಿಚಾರ ತಿಳಿದು ಸುದೀಪ್‌ನ ಪತ್ನಿ ಆತನಿಂದ ದೂರವಾಗಿದ್ದರು. ಪತ್ನಿಯನ್ನು ಬಿಟ್ಟು ಬಂದಿದ್ದ ಸುದೀಪ್, ಕಳೆದ ಎರಡು ವರ್ಷಗಳಿಂದ ಬನಶಂಕರಿಯ ಮನೆಯಲ್ಲಿ ಸೀಮಾ ದಾಸ್ ಹಾಗೂ ಆಕೆಯ ಪುತ್ರ ಸೋಹಮ್ ಜೊತೆ ವಾಸವಾಗಿದ್ದ. ಸೀಮಾ ಅವರ ಮನೆ ನಡೆಸುವುದಕ್ಕೆ ಹಾಗೂ ಪುತ್ರ ಸೋಹಮ್ ವಿದ್ಯಾಭ್ಯಾಸಕ್ಕೂ ಸುದೀಪ್ ಆರ್ಥಿಕವಾಗಿ ನೆರವು ನೀಡುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಸೀಮಾ ದಾಸ್‌ಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂಬ ಅನುಮಾನ ಸುದೀಪ್‌ಗೆ ಶುರುವಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸೀಮಾ ಸರಿಯಾಗಿ ಉತ್ತರಿಸದೆ ದೂರವಿಡಲು (Avoid) ಆರಂಭಿಸಿದ್ದರು. “ತನ್ನನ್ನು ಬಳಸಿಕೊಂಡು, ಈಗ ಬರಿಗೈ ಆದಾಗ ಮೂರನೇ ವ್ಯಕ್ತಿಯ ಹಿಂದೆ ಹೋಗಿದ್ದಾಳೆ” ಎಂಬ ಆಕ್ರೋಶದಿಂದ ಸುದೀಪ್ ಕಳೆದ ಆರು ತಿಂಗಳಿಂದ ಆಗಾಗ ಮನೆಗೆ ಬಂದು ಜಗಳವಾಡುತ್ತಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 21, 2026 12:34 PM
Loading...
Unable to load recommendations.
Follow Us
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More