ಬಾರ್, ರೆಸ್ಟೋರೆಂಟ್ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್: ನೋವಿನ ಕಥೆ ಬಿಚ್ಚಿಟ್ಟ ಮಾಲೀಕ
ಬೆಂಗಳೂರಿನ ಬಾರ್ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿವೆ. ಮಾಂಸಾಹಾರ ತಯಾರಿಕೆ ಕಷ್ಟವಾಗಿ, ವ್ಯಾಪಾರದಲ್ಲಿ ಶೇ.40ರಷ್ಟು ಕುಸಿತ ಕಂಡಿದೆ. ಬ್ಲಾಕ್ ಮಾರ್ಕೆಟ್‌ನಲ್ಲಿ ಸಿಲಿಂಡರ್‌ಗಳು 8 ರಿಂದ 10 ಸಾವಿರ ರೂಪಾಯಿಗೆ ಸಿಗುತ್ತಿದೆ. ಈ ಬಗ್ಗೆ ಬಾರ್ ಮಾಲೀಕರು ಹೇಳುವುದು ಹೀಗೆ.
ಬೆಂಗಳೂರು, ಮಾರ್ಚ್ 24: ಬೆಂಗಳೂರಿನ ಬಾರ್ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಕೊರತೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಗ್ಯಾಸ್ ಸಿಲಿಂಡರ್ ಅಭಾವದ ಎಫೆಕ್ಟ್ಗೆ ಮಾಂಸಾಹಾರ ಪದಾರ್ಥಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ, ಇದರಿಂದ ಗ್ರಾಹಕರು ಇಷ್ಟಪಡುವ ಚಿಕನ್, ಮಟನ್ ಮತ್ತು ಫಿಶ್ ಐಟಂಗಳನ್ನು ನೀಡಲು ಮಾಲೀಕರಿಗೆ ಕಷ್ಟವಾಗಿದೆ. ಸದ್ಯ ಸಲಾಡ್ ಮತ್ತು ಕೆಲವು ಸರಳ ಐಟಂಗಳನ್ನು ಮಾತ್ರ ನೀಡಲಾಗುತ್ತಿದೆ. ವ್ಯಾಪಾರದಲ್ಲಿ ಶೇ.40ರಷ್ಟು ಕುಸಿತ ಕಂಡುಬಂದಿದೆ. ಗ್ರಾಹಕರು ನಾನ್-ವೆಜ್‌ಗಾಗಿ ಬರುತ್ತಿದ್ದರೂ, ಗ್ಯಾಸ್ ಇಲ್ಲದ ಕಾರಣ ಅವರಿಗೆ ಬೇಕಾದ ಆಹಾರವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ಹೇಳುವುದೇನು ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಕ್ಯಾನ್ಸರ್, ಅದರ ತಡೆಗಟ್ಟುವಿಕೆ, ಮುಂಚಿತವಾಗಿ ಪತ್ತೆಹಚ್ಚುವಿಕೆ, ಚಿಕಿತ್ಸೆ
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್ ಮಾಡಿ ಪ್ರತಿಭಟನೆ

