AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಲ್‌ ಸ್ಪೀಡಲ್ಲಿ ರಾಂಗ್‌ ರೂಟಲ್ಲಿ ಹೋಗಿ ಆಟೋಗೆ ಡಿಕ್ಕಿ ಹೊಡೆದ ಬೈಕ್‌ ಸವಾರ

ಫುಲ್‌ ಸ್ಪೀಡಲ್ಲಿ ರಾಂಗ್‌ ರೂಟಲ್ಲಿ ಹೋಗಿ ಆಟೋಗೆ ಡಿಕ್ಕಿ ಹೊಡೆದ ಬೈಕ್‌ ಸವಾರ

ಮಾಲಾಶ್ರೀ ಅಂಚನ್​
|

Updated on: Sep 11, 2025 | 12:50 PM

Share

ಇಲ್ಲೊಬ್ಬ ಬೈಕ್‌ ಸವಾರ ರಾಂಗ್‌ ರೂಟಲ್ಲಿ ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಬೆಂಗಳೂರಿನ ಸಿವಿ ರಾಮನ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಫುಲ್‌ ಸ್ಪೀಡಲ್ಲಿ ರಾಂಗ್‌ ರೂಟಲ್ಲಿ ಹೋದ ಬೈಕ್‌ ಸವಾರ ಮುಂದಿನಿಂದ ಬರುತ್ತಿದ್ದಂತಹ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಈ ಆಘಾತಕಾರಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ದ್ವಿಚಕ್ರ ವಾಹನ ಸವಾರನ ಬೇಜವಾಬ್ದಾರಿತನಕ್ಕೆ ಜನ ಫುಲ್‌ ಗರಂ ಆಗಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್‌ 11: ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ವಾಹನ ಸವಾರನ ಕರ್ತವ್ಯ. ಆದ್ರೆ ಇಲ್ಲೊಬ್ಬ ಬೈಕ್‌ ಸವಾರ ಟ್ರಾಫಿಕ್‌ ರೂಲ್ಸ್‌ಗಳನ್ನೇ ಗಾಳಿಗೆ ತೂರಿ ರಾಂಗ್‌ ರೂಟಲ್ಲಿ ಹೋಗಿ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಬೆಂಗಳೂರಿನ ಸಿವಿ ರಾಮನ್‌ ನಗರದಲ್ಲಿ ಈ ಘಟನೆ ನಡೆದಿದ್ದು, ರಾಂಗ್‌ ರೂಟಲ್ಲಿ ಹೋದ ದ್ವಿಚಕ್ರ ವಾಹನ ಸವಾರ ಆಟೋಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಎರಡೂ ವಾಹನಗಳು ಪಲ್ಟಿಯಾಗಿವೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಬೈಕ್‌ ಸವಾರನ ಅಜಾಗರೂಕತೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ