ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ, 85.50 ಲಕ್ಷ ರೂ. ವಶಕ್ಕೆ
ಉದ್ಯಮಿಯಿಂದ 1.05 ಕೋಟಿ ರೂ. ನಗದು ದರೋಡೆ ಮಾಡಿದ್ದ ಗ್ಯಾಂಗ್‌ನ ಐವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ಚೇತನ್ ಮಾಹಿತಿ ನೀಡಿದ್ದು, ಕಳ್ಳತನಕ್ಕೆ ಸಹಕರಿಸಿದ್ದ ಎಂಬುದು ತಿಳಿದುಬಂದಿದೆ. ಬಂಧಿತರಿಂದ 85.50 ಲಕ್ಷ ರೂ. ನಗದು, ಎರಡು ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು, ಜೂನ್ 29: ಉದ್ಯಮಿಯೊಬ್ಬರಿಂದ 1.05 ಕೋಟಿ ರೂ. ನಗದು ದರೋಡೆ ಮಾಡಿದ್ದ ಗ್ಯಾಂಗ್‌ನ ಐವರು ಸದಸ್ಯರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕಾರು ಚಾಲಕ ಚೇತನ್, ಇತರ ಆರೋಪಿಗಳಾದ ಸೂರ್ಯ, ಸೋಮಶೇಖರ್ ಸಹ ಸೇರಿದ್ದಾರೆ. ಮಾದನಾಯಕನಹಳ್ಳಿ ಕುದುರುಗೆರೆ ಬಳಿ ಉದ್ಯಮಿ ಕಾರಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿ ದರೋಡೆ ಮಾಡಲಾಗಿತ್ತು.
ಉದ್ಯಮಿಯ ಕಾರು ಚಾಲಕ ಚೇತನ್ ದರೋಡೆಕೋರರಿಗೆ ಮಾಹಿತಿ ನೀಡಿದ್ದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈತನ ಸಹಾಯದಿಂದಲೇ ದರೋಡೆ ನಡೆದಿರುವುದು ದೃಢಪಟ್ಟಿದೆ. ಪೊಲೀಸರು ಬಂಧಿತರಿಂದ 85.50 ಲಕ್ಷ ರೂ. ನಗದು, ಎರಡು ಕಾರುಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದರೋಡೆಯಲ್ಲಿ ಒಟ್ಟು 10 ಮಂದಿ ಶಾಮೀಲಾಗಿದ್ದು,ಇನ್ನುಳಿದ ಐವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ದರೋಡೆ ಮಾಡಿದ ಹಣ ಬಹುತೇಕ ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣದಲ್ಲಿ ಶಾಮೀಲಾದ ಕೆಲವರು ರೌಡಿಶೀಟರ್‌ಗಳೆಂದು ತಿಳಿದುಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

