ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು

Updated on: May 23, 2026 | 2:44 PM

ಬೆಂಗಳೂರಿನಲ್ಲಿ ಸಿಎನ್‌ಜಿ ದರ 2 ರೂ ಹೆಚ್ಚಾಗಿದ್ದು, ಆಟೋ ಹಾಗೂ ಟ್ಯಾಕ್ಸಿ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರ ಬೆಲೆ ಏರಿಕೆ ಮತ್ತು ಇಂಧನ ಸಿಗಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿಯಿಂದ ಚಾಲಕರು ಜೀವನ ನಿರ್ವಹಣೆ ಕಷ್ಟಕರವಾಗಿದೆ ಎನ್ನುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದ್ದು, ರೈತರು ಹಾಗೂ ಗೃಹಬಳಕೆದಾರರಿಗೆ ಸಿಲಿಂಡರ್ ಪೂರೈಕೆಯಲ್ಲಿಯೂ ಸಮಸ್ಯೆ ಎದುರಾಗಿದೆ.

ಬೆಂಗಳೂರು, ಮೇ 23: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನೆಲ್ಲೇ ಸಿಎನ್​​ಜಿ ಬೆಲೆಯೂ ಏರಿಕೆಯಾಗಿದೆ. ಕಂಪನಿಗಳು 9 ದಿನದಲ್ಲಿ ಮೂರನೇ ಬಾರಿ ಸಿಎನ್‌ಜಿ ದರ ಏರಿಸಿವೆ. ಬೆಂಗಳೂರಿನಲ್ಲೂ CNG ದರ 2 ರೂಪಾಯಿ ಏರಿಕೆಯಾಗಿದ್ದು, ಕೆಜಿ ಸಿಎನ್​​ಜಿ 93 ರೂಪಾಯಿಯಿಂದ 95 ರೂಪಾಯಿಗೆ ಹೆಚ್ಚಳವಾಗಿದೆ. ಇದರಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಶಾಂತಿನಗರದ ಗಿಲ್ ಗ್ಯಾಸ್ ಮುಂಭಾಗದಲ್ಲಿ ಸಿಎನ್‌ಜಿಗಾಗಿ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಗಂಟೆಗಳ ಕಾಲ ಕಾದರೂ ಇಂಧನ ಸಿಗುವ ಯಾವುದೇ ಖಾತರಿಯಿಲ್ಲ. ಇದು ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಈ ನಿರಂತರ ಬೆಲೆ ಏರಿಕೆ ಮತ್ತು ಇಂಧನ ಪೂರೈಕೆ ಸಮಸ್ಯೆಯಿಂದ ಬೆಂಗಳೂರಿನಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ ಎಂದಿದ್ದಾರೆ.

ವರದಿ: ಅರುಣ್ ಕುಮಾರ್ ಮೆಟ್ರೋ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 23, 2026 02:43 PM
Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More