Bengaluru Fire Accident: ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಅಗ್ನಿ ಅವಘಡ, ಹೊತ್ತಿ ಉರಿದ ಮೂರು ಅಂತಸ್ತಿನ ಕಟ್ಟಡ
ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ನಗರದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬ್ರಿಡ್ಜ್ ಬಳಿ ಇರುವ ಮೂರು ಅಂತಸ್ತಿನ ಕಟ್ಟಡಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನಿನ್ನೆ ರಾತ್ರಿ ಬೆಂಕಿ ಹತ್ತಿಕೊಂಡಿದ್ದು, ಅಂಗಡಿ ಪಕ್ಕದಲ್ಲಿದ್ದ ಟ್ರಾನ್ಸ್ಫಾರ್ಮರ್ ಕೂಡ ಬೆಂಕಿಗಾಹುತಿಯಾಗಿದೆ. ಇದರ ವಿಡಿಯೋ ಇಲ್ಲಿದೆ.
ಬೆಂಗಳೂರು, ಡಿ.19: ನಗರದಲ್ಲಿ ಮತ್ತೊಂದು ಅಗ್ನಿ ಅವಘಡ (Bengaluru Fire Accident) ಸಂಭವಿಸಿದೆ. ನಗರದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬ್ರಿಡ್ಜ್ ಬಳಿ ಇರುವ ಮೂರು ಅಂತಸ್ತಿನ ಕಟ್ಟಡಲ್ಲಿ ನಿನ್ನೆ ರಾತ್ರಿ 11.45ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಲೂಯಿಸ್ ಫಿಲಿಪ್ ಬಟ್ಟೆ ಶೋರೂಂನಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಪಕ್ಕದ ಅಂಗಡಿಗಳು, ಟ್ರಾನ್ಸ್ಫಾರ್ಮರ್ಗೆ ಹರಡಿದೆ.
ಈ ವೇಳೆ ಕಟ್ಟಡದಲ್ಲಿದ್ದ ನಾಲ್ವರು ಪಕ್ಕದ ಕಟ್ಟಡಕ್ಕೆ ಹಾರಿದ್ದು, ಒಬ್ಬನ್ನನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಸುಮಾರು ಎರಡೂವರೆ ಗಂಟೆ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದ್ದಾರೆ,. ಅಂಗಡಿಯಲ್ಲಿದ್ದ ಅಪಾರ ಮೌಲ್ಯದ ಬಟ್ಟೆ, ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಗೆ ಗಾಯವಾಗಿದೆ. ಬಟ್ಟೆ ಶೋರೂಂನ ಸ್ವಿಚ್ ಬೋರ್ಡ್ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು

‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ

Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
