ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

Updated on: Apr 12, 2026 | 11:38 AM

ನಗರದ ಹಳೆ ಗುರಪ್ಪನಪಾಳ್ಯದ ವಾರ್ಡ್ ನಂಬರ್ 171 ರಲ್ಲಿ ಕಸ ನಿರ್ವಹಣೆಯು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ತಿಂಗಳುಗಟ್ಟಲೆ ಕಸ ಸಂಗ್ರಹವಾಗಿದ್ದು ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ. ಜಿಬಿಎ ಮತ್ತು ಬೆಂಗಳೂರು ದಕ್ಷಿಣ ನಗರಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಬೆಂಗಳೂರು, ಏಪ್ರಿಲ್ 12: ನಗರದ ಹಳೆ ಗುರಪ್ಪನಪಾಳ್ಯದ ವಾರ್ಡ್ ನಂಬರ್ 171 ರಲ್ಲಿ ಕಸ ನಿರ್ವಹಣೆಯು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ತಿಂಗಳುಗಟ್ಟಲೆ ಕಸ ಸಂಗ್ರಹವಾಗಿದ್ದು ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ. ಜಿಬಿಎ ಮತ್ತು ಬೆಂಗಳೂರು ದಕ್ಷಿಣ ನಗರಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳೀಯ ನಿವಾಸಿಗಳಾದ ಜಾಕೀರ್ ಹುಸೇನ್ ಅವರ ನೇತೃತ್ವದಲ್ಲಿ ನಾಗರಿಕರು ತಮ್ಮ ಸ್ವಂತ ವೆಚ್ಚದಲ್ಲಿ ಜೆಸಿಬಿ ಕರೆಸಿ ಕಸವನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಸದ ರಾಶಿಗಳಿಂದ ಹುಳುಗಳು, ಸೊಳ್ಳೆಗಳ ಹಾವಳಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಬ್ರ್ಯಾಂಡ್ ಬೆಂಗಳೂರು “ಬ್ಯಾಡ್ ಬೆಂಗಳೂರು” ಆಗುತ್ತಿದ್ದು, ಕಸ ನಿರ್ವಹಣೆಗಾಗಿ ಹಂಚಿಕೆಯಾದ 1400 ಕೋಟಿ ರೂಪಾಯಿಗಳ ಅನುದಾನದ ಸದ್ಬಳಕೆ ಬಗ್ಗೆ ನಾಗರಿಕರು ಪ್ರಶ್ನಿಸಿದ್ದಾರೆ. ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us