AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ ಅಬ್ದುಲ್​​ಗೆ ಚಪ್ಪಲಿ ಏಟು

ಬೆಂಗಳೂರಿನಲ್ಲಿ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ ಅಬ್ದುಲ್​​ಗೆ ಚಪ್ಪಲಿ ಏಟು

ಅಕ್ಷಯ್​ ಪಲ್ಲಮಜಲು​​
|

Updated on: Mar 26, 2026 | 1:07 PM

Share

ಬೆಂಗಳೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಅಬ್ದುಲ್ ವಿದ್ಯಾರ್ಥಿನಿಗೆ ಕ್ಲಾಸ್ ರೂಂನಲ್ಲಿ ಪ್ರಪೋಸ್ ಮಾಡಿ ಚಾಕಲೇಟ್ ನೀಡಿದ್ದಾರೆ. ವಿದ್ಯಾರ್ಥಿನಿ ಇದನ್ನು ಆಕ್ಷೇಪಿಸಿದ ನಂತರ, ವಿದ್ಯಾರ್ಥಿಗಳು ಅಬ್ದುಲ್‌ನನ್ನು ಕಾಲೇಜು ಆವರಣದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಅಬ್ದುಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಮತ್ತು ಕಾಲೇಜು ಆಡಳಿತ ಮಂಡಳಿ ದೂರು ದಾಖಲಿಸಲು ಮುಂದಾಗಿದೆ.

ಬೆಂಗಳೂರು, ಮಾ.26: ನೆಲಮಂಗಲ ತಾಲೂಕಿನ ಬೇಗೂರು ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರೊಬ್ಬರು ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲೇ ಪ್ರಪೋಸ್ ಮಾಡಿರುವ ಘಟನೆ ನಡೆದಿದೆ. ಪ್ರಾಧ್ಯಾಪಕ ಅಬ್ದುಲ್ ಎಂಬಾತ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರೀತಿ ನಿವೇದನೆ ಮಾಡಿದ್ದಾನೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿ ಪ್ರಾಂಶುಪಾಲರೊಂದಿಗೆ ಮಾತನಾಡುವಂತೆ ತಿಳಿಸಿದ್ದಾಳೆ. ಈ ಘಟನೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರಾಧ್ಯಾಪಕ ಅಬ್ದುಲ್‌ನನ್ನು ಕಾಲೇಜು ಆವರಣದಲ್ಲಿ ಅಟ್ಟಾಡಿಸಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಬ್ದುಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪ್ರಸ್ತುತ ಪ್ರಾಧ್ಯಾಪಕ ಅಬ್ದುಲ್ ತಲೆಮರೆಸಿಕೊಂಡಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಕಾಲೇಜು ಆಡಳಿತ ಮಂಡಳಿ ಪ್ರಾಧ್ಯಾಪಕನನ್ನು ವಜಾಗೊಳಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us