ಬೆಂಗಳೂರು: ಮಧ್ಯರಾತ್ರಿ ಮನೆ ಬಾಗಿಲು ಬಡಿದು ನಗ್ನ ಕಾಮುಕನಿಂದ ದಾಂಧಲೆ, ಬೆಚ್ಚಿಬಿದ್ದ ತಾಯಿ-ಮಗಳು
ಕಾಮುಕನೊಬ್ಬ ಬೆತ್ತಲೆಯಾಗಿ ಮಹಿಳೆಯರಿಬ್ಬರೇ ಇರುವ ಮನೆ ಬಾಗಿಲು ಬಡಿದು ಮಧ್ಯರಾತ್ರಿ ಮಧ್ಯರಾತ್ರಿ ದಾಂಧಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯ ಭಯ ಹುಟ್ಟಿಸುವಂತಿದೆ. ಚೀಮಸಂದ್ರದ ಕೆಆರ್ ಡಿಪೇನ್ಸ್ ಬಡಾವಣೆಯಲ್ಲಿ ಸೆಪ್ಟೆಂಬರ್ 3 ರಂದು ಘಟನೆ ನಡೆದಿದ್ದು, ಸ್ಥಳೀಯರು ಕಾಮುಕನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 9: ಕಾಮುಕನೊಬ್ಬ ನಗ್ನನಾಗಿ ಮಧ್ಯರಾತ್ರಿ ವೇಳೆ ಮಹಿಳೆಯರಿಬ್ಬರೇ ಇದ್ದ ಮನೆ ಬಾಗಿಲು ಬಡಿದು ದಾಳಿ ಮಾಡಲು ಯತ್ನಿಸಿದ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಚೀಮಸಂದ್ರದ ಕೆಆರ್ ಡಿಪೇನ್ಸ್ ಬಡಾವಣೆಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 3 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೈಯಲ್ಲಿ ಗುದ್ದಲಿಯಿಡಿದು ಬಂದು ಜೆಸ್ಸಿ ಎಂಬುವವರ ಮನೆ ಬಳಿ ತಡರಾತ್ರಿ ದಾಂಧಲೆ ಮಾಡಿದ್ದ ಕಾಮುಕ, ಬಳಿಕ ಮನೆ ಬಾಗಿಲು ಬಡಿದಿದ್ದಾನೆ. ಅಲ್ಲದೆ, ಮಗಳನ್ನು ರೇಪ್ ಮಾಡುವುದಾಗಿ ದಮ್ಕಿ ಹಾಕಿದ್ದಾನೆ. ಮನೆಯ ಬಾಗಿಲು ತೆಗೆಯದಿದಕ್ಕೆ ಕಾರಿನ ಗ್ಲಾಸ್ಗಳನ್ನೆಲ್ಲ ಒಡೆದು ಹಾಕಿದ್ದಾನೆ. ಅಷ್ಟರಲ್ಲಿ ಮನೆಯ ಹಿಂದಿನ ಡೋರ್ ಮೂಲಕ ಹೊರಗಡೆ ಕೇಳಿಸುವಂತೆ ಮಹಿಳೆ ಕಿರುಚಾಡಿದ್ದರು. ಬಳಿಕ ಸ್ಥಳೀಯರು ರಕ್ಷಣೆಗೆ ದಾವಿಸಿದ್ದರು. ನಂತರ ಬೆತ್ತಲೆ ಕಾಮುಕನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
