ಬೆಂಗಳೂರು: ಹೆಣ್ಣೂರಿನ ಅಪಾರ್ಟ್ಮೆಂಟೊಂದರ ಫ್ಲ್ಯಾಟ್ ನಲ್ಲಿ ಡ್ರಗ್ಸ್ ಸೇವಿಸುತ್ತಿದ್ದ ಆರೋಪದಲ್ಲಿ ಯುವಕ-ಯುವತಿಯರ ಬಂಧನ
ನಗರದ ಹೆಣ್ಣೂರಿನಲ್ಲಿರುವ ಅಪಾರ್ಟ್ ಮೆಂಟ್ ಒಂದರ ಮೇಲೆ ದಾಳಿ ನಡೆಸಿ ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದರು ಎನ್ನಲಾದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರನ್ನು ವಶಕ್ಕೆ ಪಡೆದರು
ನಮ್ಮ ಬೆಂಗಳೂರು ಉಡ್ತಾ ಪಂಜಾಬ್ (Udta Punjab) ಹಾಗೆ ಉಡ್ತಾ ಬೆಂಗಳೂರು ಆಗಲು ಹೊರಟಿದೆಯೇ? ಈ ವಾರ ನಡೆದ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಹೌದೆನಿಸುತ್ತದೆ. ನಿಮಗೆ ಗೊತ್ತಿದೆ, ಮೂರು ದಿನಗಳ ಹಿಂದೆ ನಗರದ ಪೊಲೀಸರು ಪ್ರತಿಷ್ಠಿತ ಹೋಟೆಲೊಂದರ ಮೇಲೆ ದಾಳಿ ನಡೆಸಿ ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದ ಅರೋಪದಲ್ಲಿ ಬಾಲಿವುಟ್ ಖ್ಯಾತ ನಟ ಶಕ್ತಿಕಪೂರ್ (Shakti Kapoor) ಅವರ ಮಗ ಸಿದ್ಧಾಂತ್ ಕಪೂರ್ (Siddhanth Kapoor) ಮತ್ತು ಇನ್ನೂ ಕೆಲವರನ್ನು ವಶಕ್ಕೆ ಪಡೆದಿದ್ದರು. ಕಳೆದ ರಾತ್ರಿ ನಗರದ ಹೆಣ್ಣೂರಿನಲ್ಲಿರುವ ಅಪಾರ್ಟ್ ಮೆಂಟ್ ಒಂದರ ಮೇಲೆ ದಾಳಿ ನಡೆಸಿ ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದರು ಎನ್ನಲಾದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರನ್ನು ವಶಕ್ಕೆ ಪಡೆದರು. ಅವರ ಫ್ಲ್ಯಾಟ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಡ್ರಗ್ಸ್ ಇರುವುದನ್ನು ನೀವು ನೋಡಬಹುದು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos