ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು; ಗುಂಡಿಗೆ ಬಿದ್ದು ಕೈ ಮುರಿದುಕೊಂಡ ಟೆಕ್ಕಿ
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿದೆ. ವರ್ತೂರಿನಲ್ಲಿ ಜನವರಿ 12ರಂದು ಸಂಜೆ ಸುಮಾರು 5 ಗಂಟೆಗೆ ನಡೆದ ಅಪಘಾತದಲ್ಲಿ ಟೆಕ್ಕಿ ಶ್ರೀಧರ್ ಅವರು ರಸ್ತೆ ಗುಂಡಿಗೆ ಬಿದ್ದು ತಮ್ಮ ಕೈ ಮುರಿದುಕೊಂಡಿದ್ದಾರೆ. ಗುಂಜೂರು ಪಾಳ್ಯ ಸಿಡಿಪಿ ರಸ್ತೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರ ಗಾಡಿ ಗುಂಡಿಯಿಂದ ಸ್ಕಿಡ್ ಆಗಿ, ಬಲಗೈಗೆ ಫ್ರ್ಯಾಕ್ಚರ್ ಆಗಿದೆ. ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರು, ಜನವರಿ 17: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಮತ್ತೆ ಮುನ್ನೆಲೆಗೆ ಬಂದಿದೆ. ವರ್ತೂರಿನಲ್ಲಿ ಜನವರಿ 12ರಂದು ಸಂಜೆ ಸುಮಾರು 5 ಗಂಟೆಗೆ ನಡೆದ ಅಪಘಾತದಲ್ಲಿ ಟೆಕ್ಕಿ ಶ್ರೀಧರ್ ಅವರು ರಸ್ತೆ ಗುಂಡಿಗೆ ಬಿದ್ದು ತಮ್ಮ ಕೈ ಮುರಿದುಕೊಂಡಿದ್ದಾರೆ. ಗುಂಜೂರು ಪಾಳ್ಯ ಸಿಡಿಪಿ ರಸ್ತೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರ ಗಾಡಿ ಗುಂಡಿಯಿಂದ ಸ್ಕಿಡ್ ಆಗಿ, ಬಲಗೈಗೆ ಫ್ರ್ಯಾಕ್ಚರ್ ಆಗಿದೆ. ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ನಗರದ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಬೆಂಗಳೂರು ಹೈಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದಿಷ್ಟ ದಿನಾಂಕದೊಳಗೆ ಬೆಂಗಳೂರಿನಲ್ಲಿ ಒಂದು ಗುಂಡಿಯೂ ಕಾಣಿಸಬಾರದು ಎಂದು ಗಡುವು ನೀಡಿದ್ದರು. ಆದರೆ, ಈ ಆದೇಶಗಳು ಮತ್ತು ಗಡುವುಗಳ ಹೊರತಾಗಿಯೂ ರಸ್ತೆ ಗುಂಡಿಗಳ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಕೆಲವೆಡೆ ತಾತ್ಕಾಲಿಕವಾಗಿ ತೇಪೆ ಹಾಕುವ ಕಾರ್ಯ ನಡೆದಿದೆಯಾದರೂ, ಇನ್ನೂ ಹಲವು ಪ್ರದೇಶಗಳಲ್ಲಿ ರಸ್ತೆ ಗುಂಡಿಗಳು ಹಾಗೆಯೇ ಉಳಿದುಕೊಂಡಿವೆ. ಟಿವಿ9 ಕನ್ನಡ ವಾಹಿನಿಯು ಗುಂಡಿಗಳ ಕುರಿತು ಅಭಿಯಾನ ನಡೆಸಿದರೂ ಸಮಸ್ಯೆ ಸಂಪೂರ್ಣ ನಿವಾರಣೆಯಾಗಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

