AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ: ಸಿಲಿಕಾನ್ ಸಿಟಿ ಕೂಲ್ ಕೂಲ್

ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ: ಸಿಲಿಕಾನ್ ಸಿಟಿ ಕೂಲ್ ಕೂಲ್

ಆರುಣ್ ಕುಮಾರ್​ ಆರ್​.
| Edited By: |

Updated on:Aug 20, 2026 | 2:06 PM

Share

ಆಗಸ್ಟ್ 20ರಂದು ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಸುರಿದು ವಾತಾವರಣ ತಂಪಾಗಿಸಿದೆ. ಕೆ.ಆರ್. ಮಾರ್ಕೆಟ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ವಾಹನ ಸಂಚಾರ ಎಂದಿನಂತೆ ಮುಂದುವರಿದಿದೆ. ಆದರೆ, ರಾಜ್ಯದಲ್ಲಿ ಒಟ್ಟಾರೆ 31% ಮಳೆ ಕೊರತೆಯಾಗಿದ್ದು, 29 ಜಿಲ್ಲೆಗಳಲ್ಲಿ ತೀವ್ರ ಕೊರತೆ ಎದುರಾಗಿದೆ. ಕೇವಲ 2 ಜಿಲ್ಲೆಗಳು ಸಾಮಾನ್ಯ ಮಳೆ ಪಡೆದಿವೆ.

ಬೆಂಗಳೂರು, ಆ.20: ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗಿನಿಂದಲೇ ಮಳೆರಾಯನ ಆಗಮನವಾಗಿದ್ದು, ನಗರದಾದ್ಯಂತ ಜಿಟಿ ಜಿಟಿ ಮಳೆಯ ಸಿಂಚನವಾಗುತ್ತಿದೆ. ಮೋಡಕವಿದ ವಾತಾವರಣದೊಂದಿಗೆ ತುಂತುರು ಮಳೆ ಸುರಿಯುತ್ತಿದ್ದು, ಸಿಲಿಕಾನ್ ಸಿಟಿಯ ಹವಾಮಾನ ಮತ್ತಷ್ಟು ತಂಪಾಗಿದೆ. ಬೆಳಗಿನಿಂದಲೇ ಮೊಡದ ವಾತಾವರಣ ಹಾಗೂ ತಂಪಾದ ಗಾಳಿ ಬೀಸುತ್ತಿದ್ದು, ನಗರವಾಸಿಗಳಿಗೆ ಹಿತಕರ ಅನುಭವ ನೀಡುತ್ತಿದೆ. ಕೆ.ಆರ್. ಮಾರ್ಕೆಟ್,ಟೌನ್‌ಹಾಲ್,ಕೆ.ಆರ್. ಸರ್ಕಲ್, ಶೇಷಾದ್ರಿಪುರಂ,ವಿಧಾನಸೌಧ, ಶಾಂತಿನಗರದಲ್ಲಿ ಮಳೆ ಬಂದಿದೆ. ಸುರಿಯುತ್ತಿರುವ ತುಂತುರು ಮಳೆಯ ನಡುವೆಯೂ ನಗರದಲ್ಲಿ ಎಂದಿನಂತೆ ವಾಹನ ಸಂಚಾರ ಮುಂದುವರಿದಿದೆ. ಆಫೀಸ್ ಹಾಗೂ ಶಾಲೆ-ಕಾಲೇಜುಗಳಿಗೆ ತೆರಳುವ ಸಾರ್ವಜನಿಕರು ಕೊಡೆ ಹಾಗೂ ರೇನ್‌ಕೋಟ್ ಹಿಡಿದು ಪ್ರಯಾಣಿಸುತ್ತಿದ್ದು, ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ರಾಜ್ಯದ 158 ಮಿ.ಮೀ ಸಾಮಾನ್ಯ ಮಳೆಯಲ್ಲಿ 127 ಮಿ.ಮೀ ಮಳೆಯಾಗಿದ್ದು, % (-)19 ರಷ್ಟು ಕೊರತೆಯೊಂದಿಗೆ ‘ಸಾಮಾನ್ಯ’ (Normal) ಮಟ್ಟವನ್ನು ಕಾಯ್ದುಕೊಂಡಿದೆ. ಸಾಮಾನ್ಯ ಮಳೆ 629 ಮಿ.ಮೀ ಪೈಕಿ 435 ಮಿ.ಮೀ ಮಳೆಯಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ % (-)31 ರಷ್ಟು ಮಳೆ ಕೊರತೆ ಎದುರಾಗಿದೆ. ರಾಜ್ಯದ ಒಟ್ಟು 31 ಜಿಲ್ಲೆಗಳ ಪೈಕಿ ಯಾವುದೇ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆಯಾಗಿಲ್ಲ. ಕೇವಲ 2 ಜಿಲ್ಲೆಗಳು ಸಾಮಾನ್ಯ ಮಳೆ ಪಡೆದಿದ್ದರೆ, ಭಾರಿ ಕೊರತೆಯನ್ನು 29 ಜಿಲ್ಲೆಗಳು ಎದುರಿಸುತ್ತಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 20, 2026 02:04 PM

Follow Us