ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ

Updated on: Apr 11, 2025 | 10:17 PM

ಬೆಂಗಳೂರಿನ ಹಲವೆಡೆ ಸಂಜೆ ಮಳೆಯಾಗಿದೆ. ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಮತ್ತು ಮಲ್ಲೇಶ್ವರಂ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಳೆಯಾಗಿದೆ. ಬಿಸಿಲಿನಿಂದ ಬೇಸತ್ತ ಜನರಿಗೆ ಮಳೆ ತಂಪನ್ನು ನೀಡಿದೆ. ಆದರೆ, ಏಕಾಏಕಿ ಆದ ಮಳೆಯಿಂದ ಬೈಕ್ ಸವಾರರು ಪರದಾಡಿದ್ದಾರೆ. ಮಳೆಯಿಂದಾಗಿ ರಸ್ತೆಗಳು ತಣ್ಣಗಾಗಿವೆ.

ಬೆಂಗಳೂರು ನಗರದ ಹಲವೆಡೆ ಮಳೆಯಾಗಿದೆ. ಟೌನ್ ಹಾಲ್, ಮೈಸೂರು ಬ್ಯಾಂಕ್‌ ಸರ್ಕಲ್, ಮೆಜೆಸ್ಟಿಕ್ ಮಲ್ಲೇಶ್ವರಂ ಸೇರಿ ಬೆಂಗಳೂರಿನ ಹಲವೆಡೆ ಸಂಜೆ ಮಳೆರಾಯ ಧರೆಗೆ ಇಳಿದಿದ್ದಾನೆ. ಬಿಸಿಲಿನ ತಾಪದಿಂದ ಬೆಂದಿದ್ದ ರಾಜಧಾನಿ ಜನರು ಸಂಜೆಯ ಮಳೆಯಿಂದ ತಂಪಾದರು. ಬಿಸಿಲಿನಿಂದ ಕಾದು ಕೆಂಡದಂತಾಗಿದ್ದ ಸಿಲಿಕಾನ್​ ಸಿಟಿಯ ರಸ್ತೆಗಳು ತಣ್ಣಗಾದವು. ಏಕಾಏಕಿ ಮಳೆಯಿಂದ ಸಂಜೆ ಹೊತ್ತು ಮನೆಗಳಿಗೆ ತೆರಳುತ್ತಿರುವ ಬೈಕ್​ ಸವಾರರು ಪರದಾಡಿದರು.