ರೋಡ್ ರೇಜ್ ಪ್ರಕರಣ, ಆರೋಪಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಮೃತನ ಕುಟುಂಬಸ್ಥರ ಆಗ್ರಹ

|

Updated on: Aug 31, 2024 | 6:43 PM

ವಿಡಿಯೋದ ಬಲಭಾಗದಲ್ಲಿ ಆರೋಪಿ ರೇಣುಕಾ ಪ್ರಸಾದ್ ನನ್ನು ಪೊಲಿಸರು ಕೊಲೆ ನಡೆದ ಸ್ಥಳದ ಮಹಜರ್ ನಡೆಸಲು ಕರೆತಂದಿರುವುದನ್ನು ನೋಡಬಹುದು. ರೆಹಮಾನ್ ಕುಟುಂಬದವರು ಪ್ರಕರಣದಲ್ಲಿ ಹಿಂದೂ ಮುಸ್ಲಿಂ ಅಂಶವಿಲ್ಲ, ನಮಗೆ ನ್ಯಾಯ ಮಾತ್ರ ಬೇಕು ಅಷ್ಟೇ ಎನ್ನುತ್ತಿದ್ದಾರೆ.

ನೆಲಮಂಗಲ: ಬುಧವಾರ ರಾತ್ರಿ ಬೆಂಗಳೂರು ನಗರದ ಹೊರವಲಯದರಲ್ಲಿ ಕಿರಿದಾದ ರಸ್ತೆಯೊಂದರ ನಡುವೆ ನಡೆದ ಜಗಳದಲ್ಲಿ 18-ವರ್ಷ ವಯಸ್ಸಿನ ಯುವಕ ಮೊಹಮ್ಮದ್ ರೆಹಮಾನ್ ಉಲ್ಲಾಹ್ ನನ್ನು ಚಾಕುವಿನಿಂದ ಇರಿದು ಕೊಂದ ಆರೋಪ ಎದುರಿಸುತ್ತಿರುವ 33 ವರ್ಷದ ರೇಣುಕಾ ಪ್ರಸಾದ್ ಗೆ ಗರಿಷ್ಠ ಶಿಕ್ಷೆಯಾಗಬೇಕೆಂದು ಮೃತ ರೆಹಮಾನ್ ಕುಟುಂದ ಸದಸ್ಯರು ಇಂದು ನೆಲಮಂಗಲದಲ್ಲಿ ರಸ್ತೆತಡೆದು ಪ್ರತಿಭಟನೆ ನಡೆಸಿದರು. ಬದುಕಿ ಬಾಳಬೇಕಿದ್ದ ಹದಿಹರೆಯದ ಯುವಕನನ್ನು ಕ್ಷುಲ್ಲಕ ಕಾರಣಕ್ಕೆ ಕೊಂದ ಪ್ರಸಾದ್ ಗೆ ಕಾನೂನು ಯಾವುದೇ ರಿಯಾಯಿತಿ ತೋರಬಾರದು ಎಂದು ಕುಟುಂಬಸ್ಥರು ಮಾಧ್ಯಮದವರಿಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ: ಬಿಎಸ್​​ಪಿ ಮುಖಂಡನಿಂದ ಯುವಕನ ಮೇಲೆ ಹಲ್ಲೆ

Published on: Aug 31, 2024 06:38 PM