ಬೆಂಗಳೂರು: ವೇದಿಕೆ ಮೇಲೆಯೇ ಸಿದ್ದರಾಮಯ್ಯನವರ ಕಾಲೆಳೆದರು ಪರಮೇಶ್ವರ!
ಬುಧವಾರ ವೇದಿಕೆ ಹತ್ತಿದಾಗ ಅವರ ಹಣೆಯಲ್ಲಿ ತಿಲಕವಿತ್ತು, ಅದನ್ನು ನೋಡೇ ಪರಮೇಶ್ವರ ಗೇಲಿ ಮಾಡಿದ್ದಕ್ಕೆ ಸಿದ್ದರಾಮಯ್ಯ ಕೂಡ ನಗುತ್ತಲೇ ಏನೋ ಸಮಜಾಯಿಷಿ ನೀಡಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) 75 ನೇ ಹುಟ್ಟುಹಬ್ಬ ಆಚರಣೆಗೆ ಅದ್ದೂರಿ ತಯಾರಿಗಳು ನಡೆದಿವೆ. ಈ ಹಿನ್ನೆಲೆಯಲ್ಲೇ ಅಮೃತ ಮಹೋತ್ಸವ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಜಿ ಪರಮೇಶ್ವರ (G Parameshwara) ಅವರ ನಡುವೆ ನಡೆದ ವಿನೋದಮಯ ಮಾತಿನ ಚಕಮಕಿ (friendly banter) ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರ ಗಮನ ಸೆಳೆಯಿತು. ವಿಚಾರವಾದಿ ಎನಿಸಿಕೊಂಡಿರುವ ಸಿದ್ದರಾಮಯ್ಯನವರು ಸಾಮಾನ್ಯವಾಗಿ ಹಣೆಗೆ ತಿಲಕ ಹಚ್ಚಿಸಿಕೊಳ್ಳುವುದಿಲ್ಲ. ಆದರೆ ಬುಧವಾರ ವೇದಿಕೆ ಹತ್ತಿದಾಗ ಅವರ ಹಣೆಯಲ್ಲಿ ತಿಲಕವಿತ್ತು, ಅದನ್ನು ನೋಡೇ ಪರಮೇಶ್ವರ ಗೇಲಿ ಮಾಡಿದ್ದಕ್ಕೆ ಸಿದ್ದರಾಮಯ್ಯ ಕೂಡ ನಗುತ್ತಲೇ ಏನೋ ಸಮಜಾಯಿಷಿ ನೀಡಿದರು.
ಇದನ್ನೂ ಓದಿ: Jog Falls: ಇದು ನಯಾಗರ ಫಾಲ್ಸ್ ಅಂದ್ಕೊಂಡ್ರಾ?; ಜೋಗ ಜಲಪಾತದ ರುದ್ರ ರಮಣೀಯ ವಿಡಿಯೋ ವೈರಲ್
Latest Videos