ಪೋಸ್ಟ್​ಮಾರ್ಟಂ ಬೇಡ, ಮಗನ ಮೃತದೇಹ ಕೊಡಿ ಎಂದು ಅತ್ತ ತಾಯಿ ನೆನೆದು ಡಿಕೆಶಿ ಕಣ್ಣೀರು

Updated on: Jun 05, 2025 | 2:07 PM

ಕಾಲ್ತುಳಿತದಲ್ಲಿ ಮೃತಪಟ್ಟವರೆಲ್ಲ ನಮ್ಮ ಕುಟುಂಬದವರೇ. ಅವರ ಮನೆಯವರ ಜತೆಗೆ ನಾವಿದ್ದೇವೆ. ನಾನಾಗಲೀ, ಸಿಎಂ ಆಗಲಿ, ಗೃಹ ಸಚಿವರಾಗಲಿ ಅಷ್ಟೊಂದು ಜನ ಸೇರಬಹುದೆಂದು ನಿರೀಕ್ಷಿಸಿಯೇ ಇರಲಿಲ್ಲ. ಇದು ಆಘಾತಕಾರಿ ಘಟನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭಾವುಕರಾಗಿ ನುಡಿದರು. ಅವರ ಮಾತುಗಳ ವಿಡಿಯೋ ಇಲ್ಲಿದೆ.

ಬೆಂಗಳೂರು, ಜೂನ್ 5: ಆರ್​ಸಿಬಿ ಐಪಿಎಲ್ ವಿಜಯೋತ್ಸವದ ಸಂದರ್ಭ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದರು. ಮಾಧ್ಯ ಪ್ರತಿನಿಧಿಗಳ ಬಳಿ ಭಾವುಕರಾಗಿ ಮಾತನಾಡಿದ ಅವರು, ಆ ಒಬ್ಬರು ತಾಯಿ, ‘‘ಪೋಸ್ಟ್​ಮಾರ್ಟಂ ಬೇಡ, ಮಗನ ಮೃತದೇಹ ಕೊಡಿ’’ ಎಂದು ಅತ್ತರು. ಇದನ್ನೆಲ್ಲ ನೋಡಿದರೆ ಕಣ್ಣೀರು ಬರದಿರುತ್ತದೆಯೇ ಎಂದರು. ಅಷ್ಟೇ ಅಲ್ಲದೆ, ಬಿಜೆಪಿ ಶವಗಳ ಮೇಲೆ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ