ರಾಜ್ಯಪಾಲರಿಗೂ ತಟ್ಟಿದ ಟ್ರಾಫಿಕ್ ಬಿಸಿ; ಸಂಚಾರ ಸುಗಮಗೊಳಿಸಲು ಖುದ್ದು ಫೀಲ್ಡಿಗಿಳಿದ ಎಸ್ಪಿ
ದಿನನಿತ್ಯ ಮಹಾನಗರಕ್ಕೆ ಲಕ್ಷಾಂತರ ಮಂದಿ ಲಗ್ಗೆ ಇಡುತ್ತಾರೆ. ಈ ಹಿನ್ನಲೆ ಸಿಲಿಕಾನ್ ಸಿಟಿ ಮಂದಿಗೆ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಅದರಂತೆ ಇಂದು(ಫೆ.29) ರಾಜ್ಯಪಾಲರಿಗೂ ಟ್ರಾಫಿಕ್ ಬಿಸಿ ತಟ್ಟಿದ್ದು, ರಾಯಚೂರಿನಿಂದ ಬೆಂಗಳೂರಿಗೆ ರಸ್ತೆ ಮೂಲಕ ತೆರಳುವಾಗ ರಾಷ್ಟ್ರೀಯ ಹೆದ್ದಾರಿ 4, ನೆಲಮಂಗಲ ನವಯುಗ ಟೋಲ್ ಬಳಿ ಫುಲ್ ಟ್ರಾಫಿಕ್ ಉಂಟಾಗಿದೆ.
ಬೆಂಗಳೂರು ಗ್ರಾಮಾಂತರ, ಫೆ.29: ರಾಜ್ಯ ರಾಜಧಾನಿ ಬೆಂಗಳೂರು, ಟ್ರಾಫಿಕ್ ಸಮಸ್ಯೆಗೂ ಹೆಸರುವಾಸಿಯಾಗಿದೆ. ದಿನನಿತ್ಯ ಮಹಾನಗರಕ್ಕೆ ಲಕ್ಷಾಂತರ ಮಂದಿ ಲಗ್ಗೆ ಇಡುತ್ತಾರೆ. ಈ ಹಿನ್ನಲೆ ಸಿಲಿಕಾನ್ ಸಿಟಿ ಮಂದಿಗೆ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಅದರಂತೆ ಇಂದು(ಫೆ.29) ರಾಜ್ಯಪಾಲರಿಗೂ ಟ್ರಾಫಿಕ್ ಬಿಸಿ ತಟ್ಟಿದ್ದು, ರಾಷ್ಟ್ರೀಯ ಹೆದ್ದಾರಿ4 ನೆಲಮಂಗಲ ನವಯುಗ ಟೋಲ್ ಬಳಿ ಫುಲ್ ಟ್ರಾಫಿಕ್ ಉಂಟಾಗಿದೆ. ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರೇ ಖುದ್ದು ಫೀಲ್ಡಿಗಿಳಿದು ಸಂಚಾರವನ್ನು ಸುಗಮಗೊಳಿಸಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್( Thawar Chand Gehlot) ಅವರು ರಾಯಚೂರಿನಿಂದ ಬೆಂಗಳೂರಿಗೆ ರಸ್ತೆ ಮೂಲಕ ತೆರಳುವಾಗ ಈ ಘಟನೆ ನಡೆದಿದ್ದು, ರಾಜ್ಯಪಾಲರ ಕಾರಿನ ಜೋತೆ
ಹತ್ತಾರು ಪೊಲೀಸ್ ವಾಹನಗಳು ಹೆದ್ದಾರಿಯಲ್ಲಿ ಹರಸಾಹಸ ಪಟ್ಟು ಸಾಗಿದ್ದಾವೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos